ADVERTISEMENT

501 ಜೋಡಿಗಳ ಸರ್ವಧರ್ಮ ಸಾಮೂಹಿಕ ವಿವಾಹ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2022, 4:16 IST
Last Updated 25 ಮಾರ್ಚ್ 2022, 4:16 IST

ಕುಂದಗೋಳ: ತಾಲ್ಲೂಕಿನ ಕಮಡೊಳ್ಳಿ ಗ್ರಾಮದಲ್ಲಿ ಮಾಜಿ ಶಾಸಕ ದಿ.ಗೋವಿಂದಪ್ಪ ಜುಟ್ಟಲ್ ಅವರ 16ನೇ ವರ್ಷದ ಪುಣ್ಯತಿಥಿಯ ಪ್ರಯುಕ್ತ ಗೋವಿಂದಪ್ಪ.ಹ.ಜುಟ್ಟಲ್‌ ಪ್ರತಿಷ್ಠಾನ ಸಮಿತಿ ಹಾಗೂ ಜನಸೇವಾ ಸಮಿತಿ ಇವರ ಸಂಯುಕ್ತ ಆಶ್ರಯದಲ್ಲಿ ಮೇ 5ರಂದು 501ಜೋಡಿಗಳ ಸರ್ವಧರ್ಮ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದು ಸಮಿತಿಯ ಅಧ್ಯಕ್ಷರಾದ ಚಂದ್ರಶೇಖರ್ ಗೋ ಜುಟ್ಟಲ್ ಹೇಳಿದರು.

ಅವರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಮ್ಮ ಗ್ರಾಮದಲ್ಲಿ ಸಾಮೂಹಿಕ ವಿವಾಹಗಳನ್ನು ಸತತವಾಗಿ 17 ವರ್ಷಗಳಿಂದ ಯಶಸ್ವಿಯಾಗಿ ನಡೆಸಿಕೊಂಡು ಬಂದಿದ್ದು ಇತ್ತೀಚೆಗೆ 3 ವರ್ಷಗಳಲ್ಲಿ ಚುನಾವಣೆ ಮತ್ತು ಕೊರೊನಾದಿಂದ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ನಡೆಸಿರಲಿಲ್ಲ. ವಿವಾಹವಾಗಲು ಇಚ್ಚಿಸುವ ವಧುವಿಗೆ ತಾಳಿ, ಕಾಲುಂಗುರ, ಬಾಸಿಂಗ ಹಾಗೂ ವರನಿಗೆ ದೋತಿ ಶರ್ಟು ಬಾಸಿಂಗ ಉಚಿತವಾಗಿ ಕೊಡಲಾಗುವುದು ಎಂದು ಹೇಳಿದರು.

ವಿವಾಹವಾಗಲು ಬಯಸುವವರು ಸರ್ಕಾರದ ನಿಯಮದ ಪ್ರಕಾರ ಅರ್ಹತೆ ಹೊಂದಿರಬೇಕು. ಈ ಸಂದರ್ಭದಲ್ಲಿ ಎರಡನೇ ವಿವಾಹಕ್ಕೆ ಅವಕಾಶ ಇರುವುದಿಲ್ಲ ಮತ್ತು ರಹವಾಸಿ ದೃಢೀಕರಣ ಪತ್ರ ಕೊಡಬೇಕು.

ADVERTISEMENT

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 8095746106, 8073914578 ಸಂಪರ್ಕಿಸಬೇಕು.

ಬಸವರಾಜ್ ನಾಯ್ಕರ್, ಜಗದೀಶ್ ಕೆರಿಮನಿ, ಮೋಹನ್ ಗುಡಿಸಲಮನೆ, ಶಂಕರಗೌಡ ದೊಡಮನಿ, ಬಸವರಾಜ ಗೋವಿಂದಪ್ಪನವರು, ಸಿದ್ದಲಿಂಗಪ್ಪ ಕರೆಮ್ಮನವರ್, ಶಂಭಯ್ಯ ನೀರಲಗಿ, ಅಡಿಯಪ್ಪ ಹೆಬಸೂರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.