
ಕುಂದಗೋಳ: ತಾಲ್ಲೂಕು ಮುಸ್ಲಿಂ ಶಾದಿ ಕಮೀಟಿ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಷಣ್ಮುಖ ಶಿವಳ್ಳಿ ನೇತೃತ್ವದಲ್ಲಿ ಡಿ.13 ರಂದು ಮುಸ್ಲಿಂ ಧರ್ಮದ 101 ಜೋಡಿ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು ಸಮಾಜ ಬಾಂಧವರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕಮಿಟಿ ಅಧ್ಯಕ್ಷ ಜಾಫರಸಾಬ್ ಕ್ಯಾಲಕೊಂಡ ಹೇಳಿದರು.
ಅವರು ಪಟ್ಟಣದ ಶಾದಿಮಹಲ್ ಸಭಾ ಭವನದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಸರ್ಕಾರ ಅಲ್ಪಸಂಖ್ಯಾತ ಸಮುದಾಯದ ಬಡ ಕುಟುಂಬದವರಿಗೆ ಸರಳ ವಿವಾಹ ಮೂಲಕ ಆರ್ಥಿಕ ನಷ್ಟವನ್ನು ಭರಿಸಲು ಈ ಯೋಜನೆಯನ್ನು ಆಯೋಜಿಸಲಾಗಿದೆ. ಈ ಸರಳ ಸಾಮೂಹಿಕ ವಿವಾಹವಾಗುವವರಿಗೆ ಸರ್ಕಾರದಿಂದ ₹ 50 ಸಾವಿರ ಆರ್ಥಿಕ ನೆರೆವು ಸಹ ನೀಡಲಾಗುವುದು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಷಣ್ಮುಖ ಶಿವಳ್ಳಿಯವರು ವಧುವವರಿಗೆ ಬಟ್ಟೆ, ಬ್ಯಾಗ್, ಛತ್ರಿ, ವಧುವಿಗೆ ತಾಳಿ, ಕಾಲುಂಗರ ಹಾಗೂ ಬಾಸಿಂಗ ನೀಡುವ ಮೂಲಕ ವಿವಾಹಕ್ಕೆ ಸಂಪೂರ್ಣ ಸಹಕಾರವನ್ನು ನೀಡುತ್ತಿದ್ದಾರೆ ಎಂದು ತಿಳಿಸಿದರು.
ವಿವಾಹ ಕಾರ್ಯಕ್ರಮದ ಸ್ಥಾನಿಧ್ಯವನ್ನು ಹುಬ್ಬಳ್ಳಿಯ ಹಜರತ್ ಸಯ್ಯದ್ ತಾಜ್ವುದ್ದಿನ ಖಾದ್ರಿ, ಪಟ್ಟಣದ ಪಂಚಗ್ರಹ ಹಿರೇಮಠದ ಶಿತಿಕಂಠೇಶ್ವರ ಸ್ವಾಮೀಜಿ, ಶಿವಾನಂದಮಠದ ಶಿವಾನಂದ ಸ್ವಾಮೀಜಿ, ಕಲ್ಯಾಣಪುರದ ಬಸವಣ್ಣಜ್ಜನವರು ವಹಿಸುವರು. ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದು, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಜ್ಯೋತಿ ಬೆಳೆಗಿಸುವರು. ಅಧ್ಯಕ್ಷತೆಯನ್ನು ಮಾಜಿ ಶಾಸಕಿ ಕುಸುಮಾವತಿ ಶಿವಳ್ಳಿ, ವಿಧಾನಸಭೆಯ ಸಭಾಪತಿ ಯು.ಟಿ,ಖಾದರ ಹಾಗೂ ಸಚಿವ ಬಿ.ಝಡ್.ಜಮೀರಅಹ್ಮದಖಾನ ಖುರಾನ ಗ್ರಂಥ ವಿತರಣೆ ಮಾಡಲಿದ್ದಾರೆ.
ಅನೇಕ ಸಚಿವರು, ಶಾಸಕರು, ಸಂಸದರು, ರಾಜಕೀಯ ಮುಖಂಡರು ಹಾಗೂ ತಾಲೂಕಿನ ಎಲ್ಲ ಗ್ರಾಮದ ಜಮಾತೀನ ಅಧ್ಯಕ್ಷರು ಪಾಲ್ಗೊಳ್ಳುವರಿದ್ದಾರೆ. ವಿವಾಹಕ್ಕೆ ಹೆಸರು ನೋಂದಾಯಿಸುವವರು. ಮೊ– 9972665465, 9739310056 ಹಾಗೂ 90193334388, 9241432699 ಇವರನ್ನು ಸಂಪರ್ಕಿಸಬೇಕು ಎಂದು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಬಾಬಾಜಾನ್ ಮುಲ್ಲಾ, ಮುಕ್ತಮಸಾಬ್ ಹುಲಗೂರ, ಶೌಕತಅಲಿ ಮುಲ್ಲಾ, ಇಮಾಬುಸಾಬ ಸುಂಕದ, ಮಹ್ಮದಶರೀಫ ಬೂಬಜಿ, ಅಕ್ಷರಬಾಷಾ ಗುಡವಾಲಾ, ಮುಕ್ತುಂಸಾಬ ಯಲಿಗಾರ, ಫೀರೋಜ ಅಹ್ಮದ ಕುರಟ್ಟಿ, ಶರೀಫಸಾಬ ನಧಾಫ, ಸಲೀಂ ಸಂಶಿ (ಕಡ್ಲಿ) ಸೇರಿದಂತೆ ಮುಂತಾದವರು ಪಾಲ್ಗೊಳ್ಳುವರು ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.