ADVERTISEMENT

ಮೀರಜ್‌–ಹುಬ್ಬಳ್ಳಿ ರೈಲು ಸಂಚಾರ ತತ್ಕಾಲಿಕ ರದ್ದು

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2020, 15:02 IST
Last Updated 2 ಫೆಬ್ರುವರಿ 2020, 15:02 IST

ಹುಬ್ಬಳ್ಳಿ: ಬೆಳಗಾವಿ ಜಿಲ್ಲೆಯ ಖಾನಾಪುರ–ಗುಂಜಿ ಮಾರ್ಗದಲ್ಲಿ ರೈಲ್ವೆ ಸಂಬಂಧಿತ ಕಾಮಗಾರಿ ನಡೆಯಲಿರುವ ಕಾರಣ ಫೆ. 4, 6, 7, 8, 9, 10 ಮತ್ತು 11ರಂದು ಮೀರಜ್‌–ಹುಬ್ಬಳ್ಳಿ ಎಕ್ಸ್‌ಪ್ರೆಸ್‌ ರೈಲಿನ ಸಂಚಾರ ರದ್ದು ಮಾಡಲಾಗಿದೆ ಎಂದು ನೈರುತ್ಯ ರೈಲ್ವೆ ತಿಳಿಸಿದೆ.

ಫೆ. 3, 6, 7, 8, 9 ಮತ್ತು 10ರಂದು ಹುಬ್ಬಳ್ಳಿ–ಮೀರಜ್ ಎಕ್ಸ್‌ಪ್ರೆಸ್‌ ಸಂಚಾರವನ್ನೂ ರದ್ದು ಮಾಡಲಾಗಿದೆ. ಫೆ. 4, 6, 7, 8, 9, 10, 11 ಮತ್ತು 12ರಂದು ಹುಬ್ಬಳ್ಳಿ–ಬಳ್ಳಾರಿ ಪ್ಯಾಸೆಂಜರ್‌ ಸಂಚಾರ ಎರಡೂ ಕಡೆಯಿಂದ ರದ್ದಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT