
ಪ್ರಜಾವಾಣಿ ವಾರ್ತೆ
ಧಾರವಾಡ: ‘ಕೇರಳ ಸರ್ಕಾರವು ಕಾಸರಗೋಡು ಸುತ್ತಲಿನ ಭಾಗದಲ್ಲೂ ಮಲೆಯಾಳಂ ಕಡ್ಢಾಯಕ್ಕೆ ಮುಂದಾಗಿರುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ಇದೆ. ಕಾನೂನು ತಜ್ಞರೊಂದಿಗೆ ಚರ್ಚಿಸಿ ಅವರು ಕ್ರಮ ವಹಿಸುತ್ತಾರೆ’ ಎಂದು ಬೃಹತ್ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ ಪ್ರತಿಕ್ರಿಯಿಸಿದರು.
ಶನಿವಾರ ಸುದ್ದಿಗಾರರೊಮದಿಗೆ ಮಾತನಾಡಿ, ಹುಬ್ಬಳ್ಳಿಯ ಮಹಿಳೆ ವಿವಸ್ತ್ರದ ಪ್ರಕರಣದ ಸತ್ಯಾಸತ್ಯತೆ ನಿಟ್ಟಿನಲ್ಲಿ ತನಿಖೆ ನಡೆಯುತ್ತಿದೆ. ಪ್ರಕರಣದಲ್ಲಿ ಅಧಿಕಾರಿಗಳ ತಪ್ಪಿದ್ದರೆ ಕ್ರಮ ಜರುಗಿಸಲಾಗುವುದು’ ಎಂದರು.
ಕೆಐಎಡಿಬಿಯಲ್ಲಿ ಭೂಸ್ವಾಧೀನದ ಹಣ ಪಾವತಿಸಲು ಅನುದಾನದ ಕೊರತೆ ಇಲ್ಲ. ಜಾಗದ ವಿವಾದ ಇದ್ದರೆ ಪಾವತಿ ತಡವಾಗುತ್ತಿದೆ. ಅಣ್ಣ ತಮ್ಮಂದಿರ ಜಗಳ, ವಿವಾದ ಪ್ರಕರಣಗಳ ಹಣವನ್ನು ಕೋರ್ಟ್‌ಗೆ ಜಮೆ ಮಾಡಿರುತ್ತೇವೆ’ ಎಂದರು ಉತ್ತರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.