
ಪ್ರಜಾವಾಣಿ ವಾರ್ತೆ
ಹುಬ್ಬಳ್ಳಿ: ನಗರ ಹಾಗೂ ತಾಲ್ಲೂಕಿನ ವಿವಿಧೆಡೆ ಶನಿವಾರ ರಾತ್ರಿ ಸಾಧಾರಣ ಮಳೆ ಸುರಿದಿದೆ.
ಹುಬ್ಬಳ್ಳಿ ನಗರದಲ್ಲಿ ಅತಿಹೆಚ್ಚು 63.5 ಮಿಮೀ ಮಳೆಯಾಗಿದ್ದು, ಗಂಗಾಧರ ನಗರದ ರತ್ನವ್ವ ಸಂಕನಾಳ ಅವರ ತಗಡಿನ ಮನೆಮೇಲೆ ಮರವೊಂದು ಉರುಳಿ ಬಿದ್ದಿದೆ. ಮನೆಗೆ ಸ್ವಲ್ಪ ಹಾನಿಯಾಗಿದ್ದು, ಯಾವುದೇ ಜೀವಹಾನಿಯಾಗಿಲ್ಲ.
ಛಬ್ಬಿಯಲ್ಲಿ 11 ಮಿಮೀ, ಶಿರಗುಪ್ಪಿಯಲ್ಲಿ 40.2 ಮಿಮೀ ಹಾಗೂ ಬ್ಯಾಹಟ್ಟಿಯಲ್ಲಿ 34.4 ಮಿಮೀ ಮಳೆ ಬಿದ್ದಿರುವುದು ದಾಖಲಾಗಿದೆ. ಭಾನುವಾರ ಸಂಜೆ ಕೂಡಾ ಸ್ವಲ್ಪ ಮಳೆ ಸುರಿಯಿತು. ವಾಹನಗಳು ಸಂಚರಿಸುವ ಮಾರ್ಗಗಳ ಅಕ್ಕಪಕ್ಕ ಗುಂಡಿಗಳಲ್ಲಿ ಮಳೆನೀರು ಸಂಗ್ರಹವಾಗಿತ್ತು. ಇದರಿಂದ ವಾಹನಗಳು ನಿಧಾನವಾಗಿ ಸಂಚರಿಸಿದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.