ಹುಬ್ಬಳ್ಳಿ: ಕೋವಿಡ್–19 ಸೋಂಕಿಗೆ ಒಳಗಾಗಿದ್ದ ಮೂರು ವರ್ಷ ಆರು ತಿಂಗಳ, ಐದುವರ್ಷದ ಗಂಡು ಮಕ್ಕಳು ಮತ್ತು ಏಳು ವರ್ಷದ ಮಗಳ ಜೀವ ಉಳಿಸಲು ಅವರ ಅಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಯಶಸ್ಸು ಕಂಡಿದ್ದಾರೆ.
ಪತಿಯ ಸಹೋದರನ ಸಂಪರ್ಕದಿಂದ ಮೂವರು ಮಕ್ಕಳಿಗೆ ಸೋಂಕು ಅಂಟಿಕೊಂಡಿತ್ತು. ಮಕ್ಕಳು ಆಸ್ಪತ್ರೆಯಲ್ಲಿ ಗಲಾಟೆ ಮಾಡುತ್ತಿದ್ದರಿಂದ ಅವರನ್ನು ಹಿಡಿಯುವುದು ಸಿಬ್ಬಂದಿಗೆ ಸವಾಲಾಗಿತ್ತು. ಮಕ್ಕಳನ್ನು ಬಿಟ್ಟಿರಲಾರದೆ ಕೊರೊನಾ ಸೋಂಕಿರದ ಮಕ್ಕಳ ತಾಯಿ ಧಾರವಾಡ ಜಿಲ್ಲಾಧಿಕಾರಿಯಿಂದ ವಿಶೇಷ ಅನುಮತಿ ಪಡೆದು ಮಕ್ಕಳೊಂದಿಗೆ ಇಲ್ಲಿನ ಕಿಮ್ಸ್ ಆಸ್ಪತ್ರೆಯಲ್ಲಿದ್ದು, ಆರೈಕೆ ಮಾಡಿದ್ದರು.
ಮೂವರು ಮಕ್ಕಳಲ್ಲಿ ಇಬ್ಬರ ಮಕ್ಕಳೊಂದಿಗೆ ಶುಕ್ರವಾರ ಸಂಜೆ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಐದು ವರ್ಷದ ಪುತ್ರ ಹಾಗೂ ಪತಿ ಇನ್ನೂ ಆಸ್ಪತ್ರೆಯಲ್ಲಿದ್ದಾರೆ.
ಸುರಕ್ಷಾ ಕ್ರಮಗಳನ್ನು ಕೈಗೊಂಡು ತಾಯಿಯನ್ನು ಮಕ್ಕಳ ಬಳಿಗೆ ಕಳುಹಿಸಲಾಗುತ್ತಿತ್ತು. ನಿರಂತರವಾಗಿ ಪರೀಕ್ಷೆಗೆ ಒಳಪಡಿಸಲಾಗಿದ್ದು, ಅವರ ವರದಿ ನೆಗಟಿವ್ ಬಂದಿದೆ ಎಂದು ಕಿಮ್ಸ್ ವೈದ್ಯರು ಖಚಿತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.