ADVERTISEMENT

ಹುಬ್ಬಳ್ಳಿ -ಹೊಸಪೇಟೆ ಮಧ್ಯೆ ಮಲ್ಟಿ ವೋಲ್ವೊ ಬಸ್‌ ಸೇವೆಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2023, 6:38 IST
Last Updated 17 ಮಾರ್ಚ್ 2023, 6:38 IST
ಹುಬ್ಬಳ್ಳಿ-ಹೊಸಪೇಟೆ ಮಾರ್ಗದಲ್ಲಿ ವೋಲ್ವೊ ಮಲ್ಟಿಎಕ್ಸೆಲ್ ಬಸ್‌ ಸಂಚಾರಕ್ಕೆ ಹುಬ್ಬಳ್ಳಿಯ  ಗೋಕುಲ ರಸ್ತೆಯ ಹೊಸ ಬಸ್‌ ನಿಲ್ದಾಣದಲ್ಲಿ ಗುರುವಾರ ಚಾಲನೆ ನೀಡಲಾಯಿತು
ಹುಬ್ಬಳ್ಳಿ-ಹೊಸಪೇಟೆ ಮಾರ್ಗದಲ್ಲಿ ವೋಲ್ವೊ ಮಲ್ಟಿಎಕ್ಸೆಲ್ ಬಸ್‌ ಸಂಚಾರಕ್ಕೆ ಹುಬ್ಬಳ್ಳಿಯ  ಗೋಕುಲ ರಸ್ತೆಯ ಹೊಸ ಬಸ್‌ ನಿಲ್ದಾಣದಲ್ಲಿ ಗುರುವಾರ ಚಾಲನೆ ನೀಡಲಾಯಿತು   

ಹುಬ್ಬಳ್ಳಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವ್ಯಾಪ್ತಿಯ ಹುಬ್ಬಳ್ಳಿ-ಗ್ರಾಮಾಂತರ ವಿಭಾಗದ ಹುಬ್ಬಳ್ಳಿ– 3ನೇ ಘಟದಿಂದ ಹುಬ್ಬಳ್ಳಿಯಿಂದ ಹೊಸಪೇಟೆ ಮಾರ್ಗದಲ್ಲಿ ವೋಲ್ವೊ ಮಲ್ಟಿಎಕ್ಸೆಲ್ ಸಾರಿಗೆ ಸೇವೆ ಆರಂಭಿಸಲಾಗಿದೆ. ನಗರದ ಗೋಕುಲ ರಸ್ತೆಯ ಹೊಸ ಬಸ್‌ ನಿಲ್ದಾಣದಲ್ಲಿ ಗುರುವಾರ ಬಸ್ ಸಂಚಾರಕ್ಕೆ ಚಾಲನೆ ನೀಡಲಾಯಿತು.

ಹುಬ್ಬಳ್ಳಿಯ ಗೋಕುಲ ರಸ್ತೆಯ ಬಸ್ ನಿಲ್ದಾಣ ಹಾಗೂ ಹೊಸೂರ ಪ್ರಾದೇಶಿಕ ಬಸ್ ನಿಲ್ದಾಣದಿಂದ ಹೊರಡುವ ಬಸ್‌, ಗದಗ, ಕೊಪ್ಪಳ ಮಾರ್ಗವಾಗಿ ಹೊಸಪೇಟೆ ತಲುಪಲಿದೆ. ಹುಬ್ಬಳ್ಳಿಯಿಂದ ಪ್ರತಿದಿನ ಬೆಳಿಗ್ಗೆ 8, ಮಧ್ಯಾಹ್ನ 12 ಮತ್ತು ಸಂಜೆ 4 ಹೊರಡಲಿದೆ. ಅದೇ ರೀತಿ ಹೊಸಪೇಟೆಯಿಂದ ಬೆಳಿಗ್ಗೆ 8, ಮಧ್ಯಾಹ್ನ 12 ಮತ್ತು ಮಧ್ಯಾಹ್ನ 3.30ಕ್ಕೆ ಹೊರಡಲಿದೆ. ಬಸ್‌ ಪ್ರಯಾಣ ದರ ₹350 ಇದೆ.

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನಿರ್ದೇಶಕರಾದ ಸಿದ್ದಲಿಂಗೇಶ ಮಠದ, ಬಸವರಾಜ ಶೇಖಪ್ಪ ಸವೂರು, ಸಂಸ್ಥೆಯ ಅಧ್ಯಕ್ಷ ಡಾ.ಬಸವರಾಜ ಎಸ್.ಕೆಲಗಾರ, ಉಪಾಧ್ಯಕ್ಷ ಶಿವಾನಂದ ಮ್ಯಾಗೇರಿ ಮತ್ತು ಅಧಿಕಾರಿಗಳು ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.