ADVERTISEMENT

ಧಾರಾಕಾರ ಮಳೆ; ತುಂಬಿ ಹರಿದ ಗೌರಿ ಹಳ್ಳ

​ಪ್ರಜಾವಾಣಿ ವಾರ್ತೆ
Published 11 ಜೂನ್ 2025, 15:48 IST
Last Updated 11 ಜೂನ್ 2025, 15:48 IST
ಮಳೆಯಿಂದಾಗಿ ನವಲಗುಂದ ತಾಲ್ಲೂಕಿನ ಹಾಳಕುಸುಗಲ್‌ ಸಮೀಪದ ಗೌರಿ ಹಳ್ಳ ತುಂಬಿ ಹರಿದಿದ್ದರಿಂದ ರೈತರು ರಸ್ತೆ ದಾಟಲು ಹರಸಾಹಸಪಟ್ಟರು
ಮಳೆಯಿಂದಾಗಿ ನವಲಗುಂದ ತಾಲ್ಲೂಕಿನ ಹಾಳಕುಸುಗಲ್‌ ಸಮೀಪದ ಗೌರಿ ಹಳ್ಳ ತುಂಬಿ ಹರಿದಿದ್ದರಿಂದ ರೈತರು ರಸ್ತೆ ದಾಟಲು ಹರಸಾಹಸಪಟ್ಟರು   

ನವಲಗುಂದ: ತಾಲ್ಲೂಕಿನಲ್ಲಿ ಬುಧವಾರ ಸುರಿದ ಮಳೆಯಿಂದಾಗಿ ಹಾಳಕುಸುಗಲ್‌ ಗ್ರಾಮ ಸಮೀಪದ ಗೌರಿ ಹಳ್ಳ ತುಂಬಿ ಹರಿಯಿತು.

ಹಳ್ಳ ತುಂಬಿದ್ದರಿಂದ ಗ್ರಾಮದಿಂದ ಜಮೀನಿಗೆ ಕೂಲಿ ಕೆಲಸಕ್ಕೆ ತೆರಳಿದ್ದ ಗ್ರಾಮಸ್ಥರು ವಾಪಸ್ ಮನೆಗೆ ಹೋಗಲು ಹರಸಾಹಸಪಟ್ಟರು.

ಗೌರಿ ಹಳ್ಳ ತುಂಬಿದಾಗ ಪ್ರತಿ ವರ್ಷ ಜಮೀನುಗಳಿಗೆ ನೀರು ನುಗ್ಗುವುದರಿಂದ ಫಸಲು ಹಾಳಾಗುತ್ತದೆ. ಸಮಸ್ಯೆ ಬಗೆಹರಿಸುವಂತೆ ಜನಪ್ರತಿನಿಧಿಗಳಿಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಕೂಡಲೇ ಸಂಬಂಧಿಸಿದವರು ಸೇತುವೆ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಸಣ್ಣ ಶೇಕಪ್ಪ ನೀಡವಣಿ ಆಗ್ರಹಿಸಿದರು.

ADVERTISEMENT

ಮಳೆಗೆ ಸಾವಿರಾರು ಎಕರೆ ಪ್ರದೇಶದಲ್ಲಿ ಬಿತ್ತನೆಯಾಗಿರುವ ಬೀಜ ಹಾನಿಯಾಗುವ ಆತಂಕ ರೈತರನ್ನು ಕಾಡುತ್ತಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.