ADVERTISEMENT

ನವಲಗುಂದ ಪುರಸಭೆ; ಅವಿರೋಧ ಆಯ್ಕೆ

ಕಾಂಗ್ರೆಸ್‌ನ ಶಿವಾನಂದ ಅಧ್ಯಕ್ಷ, ಪರೀದಾ ಬೇಗಂ ಉಪಾಧ್ಯಕ್ಷೆ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2024, 14:03 IST
Last Updated 6 ಸೆಪ್ಟೆಂಬರ್ 2024, 14:03 IST
ನವಲಗುಂದ ಪುರಸಭೆ ಸಭಾಂಗಣದಲ್ಲಿ ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಶಾಸಕ ಎನ್.ಎಚ್.ಕೋನರಡ್ಡಿ ಸನ್ಮಾನಿಸಿದರು
ನವಲಗುಂದ ಪುರಸಭೆ ಸಭಾಂಗಣದಲ್ಲಿ ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಶಾಸಕ ಎನ್.ಎಚ್.ಕೋನರಡ್ಡಿ ಸನ್ಮಾನಿಸಿದರು   

ನವಲಗುಂದ: ಇಲ್ಲಿನ ಪುರಸಭೆಯ 10ನೇ ಅವಧಿಗೆ ಕಾಂಗ್ರೆಸ್‌ನ ಶಿವಾನಂದ ತಡಸಿ ಅಧ್ಯಕ್ಷ ಹಾಗೂ ಪರೀದಾಬೇಗಂ ಬಬರ್ಚಿ ಉಪಾಧ್ಯಕ್ಷರಾಗಿ ಅವಿರೋಧವಾಗಿ ಶುಕ್ರವಾರ ಆಯ್ಕೆಯಾದರು.

23 ಸದಸ್ಯ ಬಲದ ಪುರಸಭೆಯಲ್ಲಿ ಕಾಂಗ್ರೆಸ್‌ನ 16 ಸದಸ್ಯರಿದ್ದು, ಬಿಜೆಪಿ– 6 ಮತ್ತು ಜೆಡಿಎಸ್‌  ಒಬ್ಬ ಸದಸ್ಯರನ್ನು ಹೊಂದಿದೆ. 

ಬಿಜೆಪಿಯ 6 ಜನ ಸದಸ್ಯರು ಚುಣಾವಣೆಯಿಂದ ದೂರ ಉಳಿದಿದ್ದರಿಂದ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಜೆಡಿಎಸ್ ಸದಸ್ಯ ಕಾಂಗ್ರೆಸ್ ಬೆಂಬಲಿಸಿದರು.

ADVERTISEMENT

ಕಳೆದ ಬಾರಿ ಜೆಡಿಎಸ್ ಸದಸ್ಯರು ಕಾಂಗ್ರೆಸ್‌ ಸೇರಿದ್ದರಿಂದ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ಅವರಿಗೆ ಅವಕಾಶ ನೀಡಲಾಗಿತ್ತು. ಈ ಬಾರಿ ಮೂಲ ಕಾಂಗ್ರೆಸ್ಸಿಗರಿಗೆ ಮಣೆ ಹಾಕಲಾಗಿದೆ. ವೀಕ್ಷಕರಾಗಿ ಶಾಸಕ ಪ್ರಕಾಶ ಕೋಳಿವಾಡ ಆಗಮಿಸಿದ್ದರು.

ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಶಾಸಕ ಎನ್.ಎಚ್. ಕೋನರಡ್ಡಿ ಸನ್ಮಾನಿಸಿ ಮಾತನಾಡಿ,  ಪಟ್ಟಣದ ಅಭಿವೃದ್ಧಿಗೆ ಎಲ್ಲರೂ ಶ್ರಮಿಸೋಣ ಎಂದು ಹೇಳಿದರು.

ಚುಣಾವಣಾಧಿಕಾರಿಯಾಗಿ ತಹಶೀಲ್ದಾರ್‌ ಸುಧೀರ ಸಾಹುಕಾರ ಕಾರ್ಯನಿರ್ವಹಿದರು. ಪುರಸಭೆ ಮುಖ್ಯಾಧಿಕಾರಿ ಶರಣಪ್ಪ ಪೂಜಾರ ಇದ್ದರು. ಜಿಲ್ಲಾ ಗ್ರಾಮೀಣ ಕಾಂಗ್ರೆಸ್‌ ಅಧ್ಯಕ್ಷ  ಅನಿಲಕುಮಾರ ಪಾಟೀಲ, ಮುಖಂಡ ವಿನೋದ ಅಸೂಟಿ, ನವಲಗುಂದ ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷರ ವರ್ದಮಾನಗೌಡ ಹಿರೇಗೌಡ್ರ, ಜಿಲ್ಲಾ ಕೆಡಿಪಿ ಸದಸ್ಯ ಆರ್.ಎಚ್.ಕೋನರಡ್ಡಿ  ಇದ್ದರು.

ಅಧ್ಯಕ್ಷ, ಉಪಾಧ್ಯಕ್ಷರು ಅವಿರೋಧವಾಗಿ ಆಯ್ಕೆಯಾಗುತ್ತಿದ್ದಂತೆ ಕಾಂಗ್ರೆಸ್‌ ಕಾರ್ಯಕರ್ತರು, ಮುಖಂಡರು ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.