ಹುಬ್ಬಳ್ಳಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಸಂಸ್ಥಾಪನಾ ಬೆಳ್ಳಿ ಹಬ್ಬದ ಅಂಗವಾಗಿ ಪ್ರಯಾಣಿಕರಿಗೆ ತಿಂಗಳ ಪಾಸ್ಗಳಿಗೆ ಹೆಚ್ಚುವರಿ ದಿನಗಳ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದೆ.
ಸಂಸ್ಥೆಯಲ್ಲಿ ಈವರೆಗೆ ತಿಂಗಳ ಅವಧಿಯ ಪಾಸ್ಗಳನ್ನು ಮಾತ್ರ ನೀಡಲಾಗುತ್ತಿತ್ತು. ಪ್ರಯಾಣಿಕರು ಪ್ರತಿ ತಿಂಗಳು ಬಸ್ ನಿಲ್ದಾಣಕ್ಕೆ ಬಂದು ಹೊಸ್ ಪಾಸ್ ಪಡೆಯಬೇಕಾಗಿತ್ತು. ಈ ತೊಂದರೆ ತಪ್ಪಿಸಲು ದ್ವಿಮಾಸಿಕ ಹಾಗೂ ತ್ರೈಮಾಸಿಕ ಪಾಸ್ಗಳನ್ನು ಪರಿಚಯಿಸಲಾಗಿದೆ.
ಜತೆಗೆ ಒಂದು ತಿಂಗಳ ಪಾಸ್ಗೆ 2 ದಿನ, ಎರಡು ತಿಂಗಳ ಪಾಸ್ಗೆ 5 ದಿನ ಹಾಗೂ ಮೂರು ತಿಂಗಳ ಪಾಸ್ಗೆ 10 ದಿನಗಳ ಹೆಚ್ಚುವರಿ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದೆ. ಪಾಸ್ ಹೊಂದಿರುವವರು ದಿನಕ್ಕೆ ಎಷ್ಟು ಬಾರಿ ಬೇಕಾದರೂ ಪ್ರಯಾಣ ಮಾಡಬಹುದು ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಭರತ್ ಎಸ್., ತಿಳಿಸಿದ್ದಾರೆ.
ಸಂಸ್ಥೆಯು ಧಾರವಾಡ, ಗದಗ, ಬಾಗಲಕೋಟೆ, ಹಾವೇರಿ, ಬೆಳಗಾವಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಸಾರ್ವಜನಿಕ ಸಾರಿಗೆ ಬಸ್ ಕಾರ್ಯಾಚರಣೆ ವ್ಯಾಪ್ತಿ ಹೊಂದಿದ್ದು, 9 ಆಡಳಿತ ವಿಭಾಗಗಳು ಹಾಗೂ 55 ಡಿಪೊಗಳಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.