ವಂಚನೆ
ಹುಬ್ಬಳ್ಳಿ: ಧಾರವಾಡದ ಪ್ರಕಾಶಗೌಡ ಅವರಿಗೆ ಫೇಸ್‌ಬುಕ್‌ನಲ್ಲಿ ಪರಿಚಯವಾದ ಮಧುಶ್ರೀ ಹೆಸರಿನ ಮಹಿಳೆಯು, ಟ್ರೇಡಿಂಗ್ ಮೂಲಕ ಹಣ ಗಳಿಸಬಹುದು ಎಂದು ನಂಬಿಸಿ, ₹22 ಲಕ್ಷ ವರ್ಗಾಯಿಸಿಕೊಂಡು ವಂಚಿಸಿದ್ದಾಳೆ.
ಮಹಿಳೆಯು ಪ್ರಕಾಶಗೌಡ ಅವರಿಗೆ ಟ್ರೇಡಿಂಗ್ ಬಗ್ಗೆ ವಿವರಿಸಿ ಹಣ ಹೂಡಿಕೆ ಮಾಡಿಸಿದ್ದಾಳೆ. ಆರಂಭದಲ್ಲಿ ಸ್ವಲ್ಪ ಲಾಭ ಕೊಟ್ಟಂತೆ ಮಾಡಿ, ವೈಸಿಎಂ ಆ್ಯಪ್‌ನಲ್ಲಿ ಹೆಚ್ಚಿನ ಹಣ ನೀಡಿದ್ದು ತೋರಿಸಿದ್ದಾಳೆ. ಅದನ್ನು ನಂಬಿದ ಅವರು ಹಣ ವರ್ಗಾಯಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಯತ್ನ, ಬಂಧನ: ಇಲ್ಲಿಯ ರಾಣಿ ಚನ್ನಮ್ಮ ವೃತ್ತದ ಮಿರಜನಕರ್ ಪೆಟ್ರೋಲ್ ಬಂಕ್ ಬಳಿ ಬಸ್ ಹತ್ತಲು ನಿಂತಿದ್ದ ಪ್ರಯಾಣಿಕರ ಜೇಬಲ್ಲಿದ್ದ ಹಣ ಕಳವು ಮಾಡಲು ಯತ್ನಿಸಿದ್ದ, ಸೆಟ್ಲಮೆಂಟ್‌ನ ಗಣೇಶ ಜಿ. ಎಂಬಾತನನ್ನು ಉಪನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.