ADVERTISEMENT

ಬಿಜೆಪಿ ಜೊತೆ ಹೊಂದಾಣಿಕೆಗೆ ವಿರೋಧವಿದೆ: ಜೆಡಿಎಸ್ ಮುಖಂಡ ಎನ್.ಎಚ್. ಕೋನರಡ್ಡಿ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2020, 11:52 IST
Last Updated 19 ಡಿಸೆಂಬರ್ 2020, 11:52 IST
   

ಹುಬ್ಬಳ್ಳಿ: 'ಬಿಜೆಪಿ ಜೊತೆ ಹೊಂದಾಣಿಕೆಗೆ ವೈಯಕ್ತಿಕವಾಗಿ ನನ್ನ ವಿರೋಧವಿದೆ. ಆದರೆ, ಪಕ್ಷದ ವರಿಷ್ಠರ ತೀರ್ಮಾನಕ್ಕೆ ಬದ್ಧನಿದ್ದೇನೆ' ಎಂದು ಜೆಡಿಎಸ್ ಹಿರಿಯ ಮುಖಂಡ ಎನ್.ಎಚ್. ಕೋನರಡ್ಡಿ ಅಭಿಪ್ರಾಯಪಟ್ಟರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಬಿಜೆಪಿ ಜೊತೆ ಈ ಹಿಂದೆ ಜೆಡಿಎಸ್ ಲವ್ ಮ್ಯಾರೇಜ್ ಮಾಡಿಕೊಂಡು ಸರ್ಕಾರ ರಚಿಸಿತ್ತು. ಆಗ ಹಿರಿಯರ ಮಧ್ಯಸ್ಥಿಕೆ ಇದ್ದಿದ್ದರೆ ಸಂಬಂಧ ಚೆನ್ನಾಗಿರುತ್ತಿತ್ತು. ಈಗ ಹಿರಿಯರ ಮಾತುಕತೆ ಮೂಲಕ ಮದುವೆ ಆಗುತ್ತಿದೆ. ಇನ್ನುಮುಂದೆ ಈ ಸಂಬಂಧ ಉತ್ತಮವಾಗಿ ಇರಲಿದೆ ಎನ್ನುವ ಭರವಸೆಯಿದೆ' ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT