ADVERTISEMENT

ವಿಪ್ರ ಸಮುದಾಯದ ಸಂಘಟನೆಗೆ ಸಲಹೆ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2022, 13:39 IST
Last Updated 23 ನವೆಂಬರ್ 2022, 13:39 IST
ಹುಬ್ಬಳ್ಳಿಯಲ್ಲಿ ಜರುಗಿದ ಕೇಶ್ವಾಪುರ ಬ್ರಾಹ್ಮಣರ ಕ್ಷೇಮಾಭಿವೃದ್ಧಿ ಸಂಘದ ಸಭೆಯಲ್ಲಿ ಸಂಘದ ಖಜಾಂಚಿ ವಿಲಾಸ ಕೊಣ್ಣೂರ ಮಾತನಾಡಿದರು
ಹುಬ್ಬಳ್ಳಿಯಲ್ಲಿ ಜರುಗಿದ ಕೇಶ್ವಾಪುರ ಬ್ರಾಹ್ಮಣರ ಕ್ಷೇಮಾಭಿವೃದ್ಧಿ ಸಂಘದ ಸಭೆಯಲ್ಲಿ ಸಂಘದ ಖಜಾಂಚಿ ವಿಲಾಸ ಕೊಣ್ಣೂರ ಮಾತನಾಡಿದರು   

ಹುಬ್ಬಳ್ಳಿ: ‘ವಿಪ್ರ ಸಮುದಾಯದ ಸಂಘಟನೆಗೆ ಪ್ರತಿಯೊಬ್ಬರೂ ಸಹಕರಿಸಬೇಕು. ಸಂಘದ ಕಟ್ಟಡ ವಿಸ್ತರಣಾ ಕಾಮಗಾರಿ ಪ್ರಾರಂಭವಾಗಿದ್ದು, ದಾನಿಗಳು ಆರ್ಥಿಕ ನೆರವು ನೀಡಬೇಕು’ ಎಂದುಕೇಶ್ವಾಪುರ ಬ್ರಾಹ್ಮಣರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸುನಿಲ ಗುಮಾಸ್ತೆ ಹೇಳಿದರು.

ನಗರದಲ್ಲಿ ಇತ್ತೀಚೆಗೆ ಜರುಗಿದ ಸಂಘದ 18ನೇ ಸರ್ವ ಸಾಧಾರಣ ಸಭೆಯಲ್ಲಿ ಮಾತನಾಡಿದರು.

ಸದಸ್ಯರಾದ ಮೋಹನ ಕಟ್ಟಿ, ಪ್ರಕಾಶ ಅನಿಗೋಳ, ಹನಮಂತ ಪರ್ವತಿ, ಸಿ.ಕೆ. ಖಾಸನೀಸ, ಪ್ರಹ್ಲಾದ ಕುಲಕರ್ಣಿ, ಜಿ.ಎನ್. ಕುಲಕರ್ಣಿ, ಅಶ್ವಿನಿ ಜೋಶಿ, ಹೇಮಾ ಮಮದಾಪುರ ಮಾತನಾಡಿದರು.

ADVERTISEMENT

ಇತ್ತೀಚೆಗೆ ನಿಧನರಾದ ಸಂಘದ ಸಂಸ್ಥಾಪಕ ಅಧ್ಯಕ್ಷ ಡಾ. ಪ್ರಹ್ಲಾದ ಸತ್ತೂರ, ಸದಸ್ಯರಾದ ಆರ್.ಜಿ. ಕುಲಕರ್ಣಿ, ಜಿ.ಬಿ. ಕುಲಕರ್ಣಿ, ರಾಘವೇಂದ್ರ ಜೆ. ಸಿಂಗನಮಲ್ಲಿ, ಸುನಿತಾ ಶಲವಡಿ ಹಾಗೂ ಜಯಶ್ರೀ ಇಬ್ರಾಹಿಂಪುರಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಸಂಘದ ಜಂಟಿ ಕಾರ್ಯದರ್ಶಿ ಮನೋಹರ ಪರ್ವತಿ ವಾರ್ಷಿಕ ವರದಿ ಮಂಡಿಸಿದರು. ಖಜಾಂಚಿ ವಿಲಾಸ ಕೊಣ್ಣೂರ, ವೆಂಕಟೇಶ ದಿವಾಣಜಿ, ರಾಘವೇಂದ್ರ ಗುಡಿ, ಬಿ.ಜೆ. ಕುಲಕರ್ಣಿ, ರಾಘವೇಂದ್ರ ಗೊಗ್ಗಿ, ಪ್ರದೀಪ ಜೋಶಿ, ಧೀರೇಂದ್ರ ಬಾಗಲಕೋಟೆ, ವಾಣಿಶ್ರೀ ಉಮರ್ಜಿ ಇದ್ದರು.

ಅಧ್ಯಕ್ಷರಾಗಿ ಸುನಿಲ ಗುಮಾಸ್ತೆ, ಉಪಾಧ್ಯಕ್ಷರಾಗಿ ರಾಘವೇಂದ್ರ ಗುಡಿ, ಕಾರ್ಯದರ್ಶಿಯಾಗಿ ಪ್ರಹ್ಲಾದ ಪರ್ವತಿ, ಸಹ ಕಾರ್ಯದರ್ಶಿಯಾಗಿ ಮನೋಹರ ಪರ್ವತಿ, ಖಜಾಂಚಿಯಾಗಿ ವಿಲಾಸ ಕೊಣ್ಣೂರ, ಕಾರ್ಯಕಾರಿ ಮಂಡಳಿ ಸದಸ್ಯರಾಗಿ ಕೃಷ್ಣ ಡಿ. ಕುಲಕರ್ಣಿ, ಬಿ.ಜೆ. ಕುಲಕರ್ಣಿ, ವೆಂಕಟೇಶ ದಿವಾಣಜಿ, ಮನೋಜ ಪರ್ವತಿಕರ, ಪ್ರದೀಪ ಜೋಶಿ ಹಾಗೂ ಧಿರೇಂದ್ರ ಬಾಗಲಕೋಟೆ ಅವರನ್ನು ಆಯ್ಕೆ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.