ADVERTISEMENT

ಪ್ಯಾರಾ ಶೂಟಿಂಗ್ ವಿಶ್ವಕಪ್‌; ರಾಕೇಶ ಆಯ್ಕೆ

​ಪ್ರಜಾವಾಣಿ ವಾರ್ತೆ
Published 21 ಮೇ 2025, 16:28 IST
Last Updated 21 ಮೇ 2025, 16:28 IST
ರಾಕೇಶ ನಿಡಗುಂದಿ
ರಾಕೇಶ ನಿಡಗುಂದಿ   

ಹುಬ್ಬಳ್ಳಿ: ದಕ್ಷಿಣ ಕೊರಿಯಾದ ಚಾಂಗ್ವೊನ್‌ನಲ್ಲಿ ಮೇ 28ರಿಂದ ಜೂನ್ 6ರವರೆಗೆ ನಡೆಯಲಿರುವ ಪ್ಯಾರಾ ಶೂಟಿಂಗ್ ವಿಶ್ವಕಪ್‌ಗೆ ಹುಬ್ಬಳ್ಳಿಯ ರಾಕೇಶ ನಿಡಗುಂದಿ ಆಯ್ಕೆಯಾಗಿದ್ದಾರೆ. ಅವರು ಆರ್‌1 10 ಮೀ. ಏರ್‌ ರೈಫಲ್‌ ಸ್ಟ್ಯಾಂಡಿಂಗ್ (ಎಸ್‌ಎಚ್‌1ಬಿ) ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ.

ಈಚೆಗೆ ನಡೆದ ಖೇಲೊ ಇಂಡಿಯಾ ಪ್ಯಾರಾ ಕ್ರೀಡಾಕೂಟದಲ್ಲಿಯೂ ಅವರು ಉತ್ತಮ ಪ್ರದರ್ಶನ ನೀಡಿದ್ದರು.  ಹುಬ್ಬಳ್ಳಿ ಶೂಟಿಂಗ್ ಅಕಾಡೆಮಿಯ ರವಿಚಂದ್ರ ಬಾಲೆಹೊಸೂರ ಅವರ ಬಳಿ ರಾಕೇಶ ತರಬೇತಿ ಪಡೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT