ADVERTISEMENT

ಧಾರವಾಡ: ಬಸವಣ್ಣನ ತೇರೆಳೆದ ಭಕ್ತ ಸಮೂಹ

​ಪ್ರಜಾವಾಣಿ ವಾರ್ತೆ
Published 18 ಮೇ 2022, 4:00 IST
Last Updated 18 ಮೇ 2022, 4:00 IST
ಧಾರವಾಡ ತಾಲ್ಲೂಕು ಮರೇವಾಡ ಗ್ರಾಮದ ಬಸವಣ್ಣ ದೇವರ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ಸೋಮವಾರ ರಥೋತ್ಸವ ಜರುಗಿತು
ಧಾರವಾಡ ತಾಲ್ಲೂಕು ಮರೇವಾಡ ಗ್ರಾಮದ ಬಸವಣ್ಣ ದೇವರ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ಸೋಮವಾರ ರಥೋತ್ಸವ ಜರುಗಿತು   

ಧಾರವಾಡ: ತಾಲ್ಲೂಕಿನ ಮರೇವಾಡ ಗ್ರಾಮದಲ್ಲಿ ಬಸವಣ್ಣ (ನಂದಿಶ್ವರ) ದೇವರ ವಾರ್ಷಿಕ ರಥೋತ್ಸವವು ಬಸವೇಶ್ವರ ಮಹಾರಾಜ ಕೀ ಜೈ, ಹರಹರ ಮಹಾದೇವ ಎಂಬ ಜಯ ಘೋಷಗಳೊಂದಿಗೆ ಶ್ರದ್ಧಾ ಭಕ್ತಿಯಿಂದ ಸೋಮವಾರ ಜರುಗಿತು.

ವಿವಿಧ ಜನಪದ ವಾದ್ಯ-ಮೇಳಗಳೊಂದಿಗೆ ನೆರೆದ ಅಪಾರ ಭಕ್ತ ಸಮೂಹದ ಹರ್ಷೋದ್ಗಾರಗಳ ಮಧ್ಯೆ ಬಸವಣ್ಣ (ನಂದೀಶ್ವರ) ದೇವರ ಅಲಂಕೃತ ರಥೋತ್ಸವ ವೈಭವದಿಂದ ಆರಂಭಗೊಂಡಿತು. ಭಕ್ತರು ರಥೋತ್ಸವಕ್ಕೆ ಬಾಳೆಹಣ್ಣು, ಲಿಂಬೆಹಣ್ಣು, ಉತ್ತತ್ತಿ ಎಸೆದು ಭಕ್ತಿ ಮೆರೆದರು.

ಬೆಳಿಗ್ಗೆ ಬಸವಣ್ಣ (ನಂದೀಶ್ವರ) ದೇವರ ಶಿಲಾ ವಿಗ್ರಹಕ್ಕೆ ಏಕಾದಶ ಮಹಾರುದ್ರಾಭಿಷೇಕ, ನೂರಾಎಂಟು ಬಿಲ್ವಾರ್ಚನೆ, ಪುಷ್ಪಾಲಂಕಾರ ವಿಶೇಷ ಪೂಜೆ ಮತ್ತು ಮಹಾಮಂಗಳಾರತಿ ನಡೆದವು.

ADVERTISEMENT

ನೂರಾರು ವರ್ಷಗಳಿಂದ ನಿರಂತರವಾಗಿ ನಡೆದು ಬಂದಿರುವ ಈ ಪ್ರಸಿದ್ಧ ಜಾತ್ರಾ ಮಹೋತ್ಸವದಲ್ಲಿ ಅಮ್ಮಿನಬಾವಿ ಪಂಚಗೃಹ ಹಿರೇಮಠದ ಪ್ರತಿನಿಧಿಗಳು, ಅಮ್ಮಿನಬಾವಿ ಬಸವಣ್ಣ ದೇವರ ದೇವಾಲಯದ ಪ್ರಧಾನ ಅರ್ಚಕ ಪೂಜಾರ ಬಸವರಾಜ ದೇವರು ಸೇರಿದಂತೆ ಗ್ರಾಮದ ಮಠಸ್ಥ ಜಂಗಮರು, ಊರಿನ ಹಕ್ಕು-ಬಾಬುಗಳ ಪ್ರಮುಖರು, ದೇವಾಲಯದ ಸೇವಾ ಸಮಿತಿ ಪದಾಧಿಕಾರಿಗಳು ರಥೋತ್ಸವದಲ್ಲಿ ಪಾಲ್ಗೊಂಡರು.

ಮಹಾರಾಷ್ಟ್ರ ಸೇರಿದಂತೆ ಗದಗ, ಹಾವೇರಿ, ಧಾರವಾಡ, ಬೆಳಗಾವಿ ಜಿಲ್ಲೆಯ ಭಕ್ತರು ಭಾಗಿಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.