ADVERTISEMENT

ನಿಗಮ ಸ್ಥಾಪಿಸಲು ಪಿಂಜಾರ ಸಂಘದ ಒತ್ತಾಯ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2020, 12:18 IST
Last Updated 2 ಡಿಸೆಂಬರ್ 2020, 12:18 IST
ಹುಬ್ಬಳ್ಳಿಯಲ್ಲಿ ಬುಧವಾರ ರಾಜ್ಯ ನದಾಫ್‌, ಪಿಂಜಾರ ಸಂಘದ ತಾಲ್ಲೂಕು ಶಹರ ಘಟಕದ ಪದಾಧಿಕಾರಿಗಳು ಘೋಷಣೆಗಳನ್ನು ಕೂಗಿದರು
ಹುಬ್ಬಳ್ಳಿಯಲ್ಲಿ ಬುಧವಾರ ರಾಜ್ಯ ನದಾಫ್‌, ಪಿಂಜಾರ ಸಂಘದ ತಾಲ್ಲೂಕು ಶಹರ ಘಟಕದ ಪದಾಧಿಕಾರಿಗಳು ಘೋಷಣೆಗಳನ್ನು ಕೂಗಿದರು   

ಹುಬ್ಬಳ್ಳಿ: ‘ನಮ್ಮ ಸಮಾಜ ಆರ್ಥಿಕವಾಗಿ, ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ ಸಾಕಷ್ಟು ಹಿಂದುಳಿದಿದ್ದು, ಈ ಕ್ಷೇತ್ರಗಳಲ್ಲಿ ಅಭಿವೃದ್ಧಿ ಹೊಂದಲು ನಮಗೂ ನಿಗಮ ಮಂಡಳಿ ಸ್ಥಾಪಿಸಬೇಕು’ ಎಂದು ಕರ್ನಾಟಕ ರಾಜ್ಯ ನದಾಫ್‌, ಪಿಂಜಾರ ಸಂಘದ ಹುಬ್ಬಳ್ಳಿ ತಾಲ್ಲೂಕು ಶಹರ ಘಟಕದ ಪದಾಧಿಕಾರಿಗಳು ಒತ್ತಾಯಿಸಿದರು.

ನಗರದ ಮಿನಿವಿಧಾನ ಸೌಧದ ಮುಂದೆ ಬುಧವಾರ ಘೋಷಣೆಗಳನ್ನು ಕೂಗಿದ ಪದಾಧಿಕಾರಿಗಳು ‘ಕೇಂದ್ರ ಸರ್ಕಾರ ನದಾಫ್‌, ಪಿಂಜಾರ ಜನಾಂಗವನ್ನು ಒಬಿಸಿ ಪಟ್ಟಿಯಲ್ಲಿ ಸೇರ್ಪಡೆ ಮಾಡಿದ್ದು, ರಾಜ್ಯದಲ್ಲಿ ನಮ್ಮ ಜನಾಂಗವನ್ನು ಅತ್ಯಂತ ಹಿಂದುಳಿದ ಪಟ್ಟಿಯಲ್ಲಿ ಗುರುತಿಸಲಾಗಿದೆ. ಗಾದಿ ತಯಾರಿಸುವುದು, ಹಗ್ಗ–ಕಣ್ಣಿಗಳ ತಯಾರಿಕೆಯ ಮೇಲೆ ನಮ್ಮ ಸಮಾಜದ ಜನರ ಜೀವನ ಅಲವಂಬಿತವಾಗಿದೆ. ಆದ್ದರಿಂದ ಸಮಾಜದ ಜೀವನ ಗುಣಮಟ್ಟಕ್ಕೆ ನಿಗಮ ಅಗತ್ಯವಿದೆ’ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ನಿಗಮ ರಚನೆ ಮಾಡಬೇಕು ಎಂದು ಅನೇಕ ವರ್ಷಗಳಿಂದ ಬೇಡಿಕೆ ಮಂಡಿಸುತ್ತಾ ಬಂದಿದ್ದೇವೆ. ಪ್ರತಿ ವರ್ಷ ಇದಕ್ಕಾಗಿ ಮನವಿ ಪತ್ರಗಳನ್ನು ಸಲ್ಲಿಸಿ ಹೋರಾಟಗಳನ್ನೂ ಮಾಡಿದ್ದೇವೆ. ಆದರೂ ಬೇಡಿಕೆ ಈಡೇರಿಲ್ಲ. ಈ ಸಲವಾದರೂ ಪರಿಗಣನೆಗೆ ತೆಗೆದುಕೊಳ್ಳಬೇಕು, ನಿಗಮ ಸ್ಥಾಪಿಸಬೇಕು ಎಂದು ಕೋರಿದ್ದಾರೆ.

ADVERTISEMENT

ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಬಿ. ಶಮಶುದ್ದೀನ್‌, ಕಾರ್ಯದರ್ಶಿ ದಾವಲಸಾಬ ಎಚ್‌. ನದಾಫ್‌, ಎಚ್‌.ಎಂ. ದೊಡ್ಡಮನಿ, ಎನ್‌.ಎಸ್‌. ನದಾಫ್‌, ಡಿ.ಎಚ್‌. ನದಾಫ್‌, ಎಂ.ಎ. ನದಾಫ್‌, ಬಿ.ಆರ್‌. ಪಿಂಜಾರ, ಎಸ್‌.ಬಿ. ಹುಬ್ಬಳ್ಳಿ, ಎಚ್‌.ಎ. ಕಂಚಗಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.