ADVERTISEMENT

ಹುಬ್ಬಳ್ಳಿ: ಸಿಆರ್‌ಎಫ್ ರಸ್ತೆ ಗುಂಡಿಗಳಿಗೆ ಮುಕ್ತಿ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2020, 13:04 IST
Last Updated 19 ಆಗಸ್ಟ್ 2020, 13:04 IST
ಹುಬ್ಬಳ್ಳಿಯ ಹೊಸ ಕೋರ್ಟ್ ರಸ್ತೆಯಲ್ಲಿರುವ ಗುಂಡಿಗಳಿಗೆ ವೆಟ್ ಮಿಕ್ಸ್ ಹಾಕಿ ಮುಚ್ಚಲಾಯಿತು
ಹುಬ್ಬಳ್ಳಿಯ ಹೊಸ ಕೋರ್ಟ್ ರಸ್ತೆಯಲ್ಲಿರುವ ಗುಂಡಿಗಳಿಗೆ ವೆಟ್ ಮಿಕ್ಸ್ ಹಾಕಿ ಮುಚ್ಚಲಾಯಿತು   

ಹುಬ್ಬಳ್ಳಿ: ಮಳೆಯಿಂದಾಗಿ ನಗರದ ಸಿಆರ್‌ಎಫ್‌ (ಕೇಂದ್ರ ರಸ್ತೆ ನಿಧಿ) ರಸ್ತೆಗಳಲ್ಲಿ ಉಂಟಾಗಿರುವ ಗುಂಡಿಗಳನ್ನು ಮುಚ್ಚಲು ಲೋಕೋಪಯೋಗಿ ಇಲಾಖೆಯ ರಾಷ್ಟ್ರೀಯ ಹೆದ್ದಾರಿ ವಿಭಾಗ ಮುಂದಾಗಿದೆ.

ಹೊಸ ಕೋರ್ಟ್ ರಸ್ತೆ, ಶಿರೂರು ಪಾರ್ಕ್, ಗೋಕುಲ ರಸ್ತೆ ಸೇರಿದಂತೆ ನಗರದ ಸಿಆರ್‌ಎಫ್‌ ರಸ್ತೆಯ ಗುಂಡಿಗಳಿಗೆ ಜಲ್ಲಿಪುಡಿ ಮಿಶ್ರಿತ ವೆಟ್ ಮಿಕ್ಸ್ ಹಾಕಿ ಮುಚ್ಚಲಾಗುತ್ತಿದೆ.

‘ಪಾಲಿಕೆ ವ್ಯಾಪ್ತಿಯ ಕೆಲ ರಸ್ತೆಗಳು ಮಳೆಯಿಂದಾಗಿ ಹದಗೆಟ್ಟಿವೆ. ಸದ್ಯ ಶಾಶ್ವತ ದುರಸ್ತಿ ಕೆಲಸ ಸಾಧ್ಯವಿಲ್ಲದಿರುವುದರಿಂದ, ಗುಂಡಿಗಳಿಗೆ ತಾತ್ಕಾಲಿಕವಾಗಿ ವೆಟ್ ಮಿಕ್ಸ್ ಹಾಕಲಾಗುತ್ತಿದೆ’ ಎಂದು ರಾಷ್ಟ್ರೀಯ ಹೆದ್ದಾರಿ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಆರ್‌.ಕೆ. ಮಠದ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ADVERTISEMENT

‘ಕಾರವಾರ ರಸ್ತೆ, ನೀಲಿಜಿನ್ ರಸ್ತೆ ಸೇರಿದಂತೆ ಕೆಲವೆಡೆ ನಡೆಯುತ್ತಿರುವ ಸಿಆರ್‌ಎಫ್ ರಸ್ತೆ ಕಾಮಗಾರಿಯು ಮಳೆಯಿಂದಾಗಿ ಮಂದಗತಿಯಲ್ಲಿ ಸಾಗುತ್ತಿದೆ. ಮಳೆ ಬಿಡುವು ಕೊಟ್ಟರೆ, ಕಾಮಗಾರಿ ಮತ್ತಷ್ಟು ತ್ವರಿತಗೊಳ್ಳಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.