
ಹುಬ್ಬಳ್ಳಿ: ‘ನರೇಗಾ’ದ ಅಂಶಗಳು ವಿಬಿ–ಜಿ ರಾಮ್ ಜಿ’ ಯೋಜನೆಯ ಕಾಯ್ದೆಯಲ್ಲೂ ಇವೆ. ‘ವಿಕಸಿತ ಭಾರತ–2047’ ನಿರ್ಮಾಣದ ಎಲ್ಲ ಪರಿಕಲ್ಪನೆಗಳನ್ನು ಇದು, ಒಳಗೊಂಡಿದೆ. ಈ ಬಗ್ಗೆ ಕಾಂಗ್ರೆಸ್‌ನವರಿಗೆ ತಿಳಿವಳಿಕೆಯಿಲ್ಲ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿಳಿಸಿದರು.
‘ಮಹಾತ್ಮಗಾಂಧಿ ಅವರಿಗೆ ಶ್ರೀರಾಮ ಪ್ರಿಯವಾದ ವ್ಯಕ್ತಿ. ಅವರ ಹೆಸರನ್ನೇ ವಿಬಿ–ಜಿ ರಾಮ್ ಜಿ ಕಾಯ್ದೆಯಲ್ಲಿ ಸೇರಿಸಲಾಗಿದೆ. ನಕಲಿ ಗಾಂಧಿಗಳು ಇದನ್ನು ತಿಳಿಯಬೇಕು. ತಮ್ಮ ವೈಫಲ್ಯವನ್ನು ಮುಚ್ಚಿಕೊಳ್ಳಲು ಹಾಗೂ ರಾಹುಲ್ ಗಾಂಧಿ ಅವರನ್ನು ಮೆಚ್ಚಿಸಲು ನೂತನ ಕಾಯ್ದೆಯ ವಿರುದ್ಧ ಸುಳ್ಳು ಹೇಳಿಕೆ ನೀಡುತ್ತಿದ್ದಾರೆ’ ಎಂದು ಮಂಗಳವಾರ ಸುದ್ದಿಗಾರರಿಗೆ ತಿಳಿಸಿದರು.
‘ಅಧಿವೇಶನದಲ್ಲಿ ಭಾಷಣ ಓದಿದ್ದಕ್ಕೂ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಸಚಿವರು ದಲಿತ ಸಮುದಾಯದ ರಾಜ್ಯಪಾಲರ ವಿರುದ್ಧ ಮಾತನಾಡಿದ್ದು ಅಕ್ಷಮ್ಯ. ಈ ಬಗ್ಗೆ ಸಿದ್ದರಾಮಯ್ಯ ಅವರು ರಾಜ್ಯಪಾಲರ ಕ್ಷಮೆ ಕೇಳಬೇಕು’ ಎಂದು ಆಗ್ರಹ ಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.