ಅರವಿಂದ ಬೆಲ್ಲದ
ಧಾರವಾಡ: ‘ರಾಹುಲ್ ಗಾಂಧಿ ಅವರು ಚುನಾವಣಾ ‘ಸ್ಟಂಟ್’ ಮಾಡುತ್ತಾರೆ. ಸ್ವಯಂ ಸೇವಾ ಸಂಸ್ಥೆಗಳ (ಎನ್‌ಜಿಒ) ಮಾತು ಕೇಳಿ ಅವರು ಈ ರೀತಿ ಮಾಡುತ್ತಾರೆ’ ಎಂದು ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಕುಟುಕಿದರು.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ,‘ರಾಹುಲ್ ಅವರು ಮಹದೇವಪುರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮಾತ್ರ ಯಾಕೆ ಆಕ್ಷೇಪ ಎತ್ತಿದ್ದಾರೆ. ಪಕ್ಕದ ಶಿವಾಜಿನಗರ, ಸರ್ವಜ್ಞನಗರ ಕ್ಷೇತ್ರಗಳ ಬಗ್ಗೆ ಯಾಕೆ ಆಕ್ಷೇಪ ಎತ್ತಿಲ್ಲ’ ಎಂದು ಪ್ರಶ್ನಿಸಿದರು.
‘ರಾಹುಲ್ ಅವರ ಆರೋಪದಲ್ಲಿ ಹುರುಳಿಲ್ಲ. ಇಂಥ ಹುರುಳಿಲ್ಲದ ವಿಷಯಗಳು ಬಹಳ ದಿನ ನಿಲ್ಲಲ್ಲ’ ಎಂದರು.
‘2024ರಲ್ಲಿ ಲೋಕಸಭೆ ಚುನಾವಣೆ ನಡೆದಾಗ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವೇ ಇತ್ತು. ಒಬ್ಬರ ಹೆಸರು ಎರಡು, ಮೂರು ಕಡೆ ಇರುವಂಥ ತಪ್ಪುಗಳು ಎಲ್ಲ ಕ್ಷೇತ್ರಗಳಲ್ಲೂ ಇರುತ್ತವೆ. ಇಂಥ ತಪ್ಪುಗಳನ್ನು ಸರಿಪಡಿಸಲು ‘ಆಧಾರ್’ ಜೋಡಣೆಗೆ ಈ ಹಿಂದೆ ಮುಂದಾದಾಗ ಕಾಂಗ್ರೆಸ್‌ನವರೇ ಸುಪ್ರೀಂ ಕೋರ್ಟ್ ಮೆಟ್ಟಲು ಏರಿ ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು. ಬಿಹಾರದಲ್ಲಿ ನಕಲಿ ವೋಟು ಸ್ವಚ್ಛ ಮಾಡುವ ಕೆಲಸ ಮಾಡಲು ಮುಂದಾದಾಗ ರಾಹುಲ್ ಗಾಂಧಿ ಅವರೇ ವಿರೊಧ ವ್ಯಕ್ತಪಡಿಸಿದರು’ ಎಂದು ಆಪಾದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.