ADVERTISEMENT

ರೈಲ್ವೆ: 2022ರೊಳಗೆ ರಾಜ್ಯದ ವಿದ್ಯುದೀಕರಣ ಕಾಮಗಾರಿ ಪೂರ್ಣ

ಬೆಂಗಳೂರಿನಲ್ಲಿ ಕೇಂದ್ರೀಯ ರೈಲ್ವೆ ವಿದ್ಯುದೀಕರಣ ಯೋಜನಾ ಘಟಕ ಸ್ಥಾಪನೆ, ಅಧಿಕಾರಿ ನೇಮಕ

​ಪ್ರಜಾವಾಣಿ ವಾರ್ತೆ
Published 29 ಜುಲೈ 2019, 18:47 IST
Last Updated 29 ಜುಲೈ 2019, 18:47 IST

ಹುಬ್ಬಳ್ಳಿ: ಚಿಕ್ಕಬಾಣಾವರ– ಹುಬ್ಬಳ್ಳಿ ಸೇರಿದಂತೆ ರಾಜ್ಯದ ಬಹುತೇಕ ಎಲ್ಲ ಪ್ರಮುಖ ರೈಲು ಮಾರ್ಗಗಳನ್ನು ಮುಂದಿನ ಎರಡೂವರೆ ವರ್ಷದಲ್ಲಿ (2021–22) ವಿದ್ಯುದೀಕರಣ ಮಾಡುತ್ತಿದ್ದು, ಈ ಕಾಮಗಾರಿಗೆ ಚುರುಕು ಮುಟ್ಟಿಸಲು ಕೇಂದ್ರ ರೈಲ್ವೆ ವಿದ್ಯುದೀಕರಣ ಯೋಜನಾ ಘಟಕದ (ಕೋರ್‌) ಶಾಖೆಯನ್ನು ಬೆಂಗಳೂರಿನಲ್ಲಿ ಸ್ಥಾಪಿಸಲು ನಿರ್ಧರಿಸಲಾಗಿದೆ.

ವಿದ್ಯುದೀಕರಣ ಯೋಜನೆಯ ಮುಖ್ಯ ಯೋಜನಾ ನಿರ್ದೇಶಕರಾಗಿ ಆರ್‌.ಎ.ಚೌಧರಿ ಅವರನ್ನು ನೇಮಿಸಿದ್ದು, ಅವರು ಬೆಂಗಳೂರಿನಲ್ಲಿಯೇ ಇದ್ದು ಕೆಲಸ ಮಾಡಲಿದ್ದಾರೆ. ರೈಲ್ವೆ ಮತ್ತು ರಾಜ್ಯ ಸರ್ಕಾರದ ನಡುವೆ ಸಮನ್ವಯ ಸಾಧಿಸುವ ಜವಾಬ್ದಾರಿಯನ್ನೂ ಅವರಿಗೆ ವಹಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT