ADVERTISEMENT

ಹುಬ್ಬಳ್ಳಿ–ಧಾರವಾಡದಲ್ಲಿ ಮಳೆ: ಬೈಪಾಸ್‌ ರಸ್ತೆ ಮಣ್ಣು ಕುಸಿತ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2024, 15:57 IST
Last Updated 10 ಅಕ್ಟೋಬರ್ 2024, 15:57 IST
ಧಾರವಾಡ– ಹುಬ್ಬಳ್ಳಿ ಬೈಪಾಸ್‌ ರಸ್ತೆಯಲ್ಲಿ (ಯರಿಕೊಪ್ಪ ಬಳಿ) ಗುರುವಾರ ಸಾಲುಗಟ್ಟಿ ನಿಂತಿದ್ದ ವಾಹನಗಳು
ಪ್ರಜಾವಾಣಿ ಚಿತ್ರ, ಬಿ.ಎಂ.ಕೇದಾರನಾಥ
ಧಾರವಾಡ– ಹುಬ್ಬಳ್ಳಿ ಬೈಪಾಸ್‌ ರಸ್ತೆಯಲ್ಲಿ (ಯರಿಕೊಪ್ಪ ಬಳಿ) ಗುರುವಾರ ಸಾಲುಗಟ್ಟಿ ನಿಂತಿದ್ದ ವಾಹನಗಳು ಪ್ರಜಾವಾಣಿ ಚಿತ್ರ, ಬಿ.ಎಂ.ಕೇದಾರನಾಥ   

ಧಾರವಾಡ: ಗುರುವಾರ ಸುರಿದ ಮಳೆಗೆ ಹುಬ್ಬಳ್ಳಿ–ಧಾರವಾಡ ಬೈಪಾಸ್‌ ರಸ್ತೆಯಲ್ಲಿ (ಮನಸೂರು ಕ್ರಾಸ್‌ಸಮೀಪ) ನೀರು ರಸ್ತೆಗೆ ಡಾಂಬರು ಕೆಲವೆಡೆ ಕಿತ್ತಿದೆ, ಮಣ್ಣು ಕುಸಿದಿದೆ.

ಬೈಪಾಸ್‌ ಮಾರ್ಗದಲ್ಲಿ ವಾಹನಗಳ ಸಂಚಾರಕ್ಕೆ ತೊಡಕಾಗಿತ್ತು. ಬೈಪಾಸ್‌ ರಸ್ತೆಯಲ್ಲಿ ಬೆಳಿಗ್ಗೆ ವಾಹನಗಳು ಗಂಟೆಗಟ್ಟಲೇ ಸಾಲುಗಟ್ಟಿ ನಿಂತಿದ್ದವು. ನಂತರ ನಿಧಾನವಾಗಿ ಸಾಗಿದವು. ಬೈಪಾಸ್‌ ಮಾರ್ಗದಲ್ಲಿ ನೀರು ರಸ್ತೆಗೆ ಹೊರಳಿ ಬಿಗ್‌ ಮಿಶ್ರಾ ಘಟಕದ ಸಮೀಪವೂ ಸಮಸ್ಯೆಯಾಗಿತ್ತು.

ನಗರದ ಭಾವಿಕಟ್ಟಿ ಪ್ಲಾಟ್‌, ಬಸವ ನಗರ, ವೀರಸೋಮೇಶ್ವರ ನಗರ, ಸಿಬಿ ನಗರ ಸಹಿತ ತಗ್ಗುಪ್ರದೇಶಗಳಲ್ಲಿ ಮನೆಗಳಿಗೆ ನೀರು ನುಗ್ಗಿತ್ತು.

ADVERTISEMENT

ಹೂಲಿಕೇರಿ ಕೆರೆ ಭರ್ತಿ: ಅಳ್ನಾವರ ತಾಲ್ಲೂಕಿನ ಹೂಲಿಕೇರಿ ಕೆರೆ ಈ ವರ್ಷ ಎರಡನೇ ಬಾರಿಗೆ ಭರ್ತಿಯಾಗಿದೆ. ಕೋಡಿಯಲ್ಲಿ ಜಲಧಾರೆ ಧುಮ್ಮಿಕ್ಕುತ್ತಿದೆ.

ಧಾರವಾಡ 6.1, ಕುಂದಗೊಳ 5.5 ಹಾಗೂ ಹುಬ್ಬಳ್ಳಿ ನಗರ 5.3 ಸೆಂ.ಮೀ ಮಳೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.