
ಪ್ರಜಾವಾಣಿ ವಾರ್ತೆ
ಡಿಜಿಪಿ ಕೆ.ರಾಮಚಂದ್ರ ರಾವ್, ಎಚ್.ಕೆ.ಪಾಟೀಲ
ಧಾರವಾಡ: ‘ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಡಿಜಿಪಿ ಕೆ.ರಾಮಚಂದ್ರ ರಾವ್ ಅವರು ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿರುವುದು ನಿಜವಾಗಿದ್ದರೆ, ಅವರಿಗೆ ಶಿಕ್ಷೆಯಾಗಬೇಕು’ ಎಂದು ಕಾನೂನು ಸಚಿವ ಎಚ್.ಕೆ.ಪಾಟೀಲ ಪ್ರತಿಕ್ರಿಯಿಸಿದರು.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ರಾಮಚಂದ್ರ ರಾವ್ ಅವರು ಅಸಭ್ಯವಾಗಿ ವರ್ತಿಸಿದ್ಧಾರೋ? ಇಲ್ಲವೋ? ಎಂಬುದು ನನಗೆ ಗೊತ್ತಿಲ್ಲ. ಅವರು ಹಾಗೆ ವರ್ತಿಸಿದ್ದರೆ ಅದು ತಪ್ಪು’ ಎಂದು ತಿಳಿಸಿದರು.
‘ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಅವರ ವಿರುದ್ಧ ಬಿಜೆಪಿಯವರು ಲಂಚದ ಆರೋಪ ಮಾಡಿದ್ದಾರೆ. ಆರೋಪಕ್ಕೆ ಸಂಬಂಧಿಸಿದಂತೆ ಬಿಜೆಪಿಯವರ ಬಳಿ ಏನು ದಾಖಲೆಗಳು ಇವೆ. ಆರೋಪದಲ್ಲಿ ಹುರುಳಿಲ್ಲ. ತಿಮ್ಮಾಪುರ ಅವರ ಚಾರಿತ್ರ್ಯ ವಧೆ ಮಾಡುವ ಪ್ರಯತ್ನ ಇದು’ ಎಂದು ಎಂದು ಉತ್ತರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.