ADVERTISEMENT

ಜ್ಞಾನಾರ್ಜನೆಗಾಗಿ ಓದಿ: ಶೋಭಾ ನಾಯಕ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2024, 16:00 IST
Last Updated 30 ಮಾರ್ಚ್ 2024, 16:00 IST
ಧಾರವಾಡದ ರಾ.ಹ. ದೇಶಪಾಂಡೆ ಸಭಾಭವನದಲ್ಲಿ ಈಚೆಗೆ ಆಯೋಜಿಸಿದ್ದ ಉಪನ್ಯಾಸದಲ್ಲಿ ಶೋಭಾ ನಾಯಕ ಮಾತನಾಡಿದರು
ಧಾರವಾಡದ ರಾ.ಹ. ದೇಶಪಾಂಡೆ ಸಭಾಭವನದಲ್ಲಿ ಈಚೆಗೆ ಆಯೋಜಿಸಿದ್ದ ಉಪನ್ಯಾಸದಲ್ಲಿ ಶೋಭಾ ನಾಯಕ ಮಾತನಾಡಿದರು   

ಧಾರವಾಡ: ಯುವಜನತೆಯಲ್ಲಿ ಓದುವ ಹವ್ಯಾಸ ಕಡಿಮೆಯಾಗುತ್ತಿದ್ದು, ಕೇವಲ ಕಲಿಕೆಗಾಗಿ ಓದದೆ ಜ್ಞಾನಾರ್ಜನೆಗಾಗಿ ಓದಬೇಕು ಎಂದು ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಉಪನ್ಯಾಸಕಿ ಶೋಭಾ ನಾಯಕ ಹೇಳಿದರು.

ಕರ್ನಾಟಕ ವಿದ್ಯಾವರ್ಧಕ ಸಂಘವು, ಪ್ರೊ.ಎಸ್.ಎಲ್. ಸಂಗಮ ದತ್ತಿ ಅಂಗವಾಗಿ ಈಚೆಗೆ ಆಯೋಜಿಸಿದ್ದ ಉಪನ್ಯಾಸ ಮಾಲಿಕ-8ರಲ್ಲಿ ‘ನಿಜದ ನೆಲೆಯಲ್ಲಿ ಓದು’ ಕುರಿತು ಅವರು ಮಾತನಾಡಿದರು.

ಓದು ಅನ್ನಮಯ ಕೋಶದಿಂದ ಆನಂದಮಯ ಕೋಶವನ್ನು ಹೊಂದುತ್ತದೆ. ಹಿಂದೆ ಪುರಾಣ, ನಾಟಕಗಳ ಮೂಲಕ ಜನರು ರಸಾನುಭವವನ್ನು ಹೊಂದುತ್ತಿದ್ದರು. ನಿಜವಾದ ಓದು ಮನಸ್ಸಿನ ಮೇಲೆ ಆಳವಾದ ಪ್ರಭಾವವನ್ನು ಬೀರುತ್ತದೆ. ನಿಜ ನೆಲೆಯ ಓದು ನಮ್ಮ ಜೀವನದ ಮುಖ್ಯ ಅಂಶವಾಗಿದೆ ಎಂದು ಹೇಳಿದರು.

ADVERTISEMENT

ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು.

ಬೆಳಗಾವಿಯ ರಾಣಿಚೆನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ತ್ಯಾಗರಾಜ, ಕರ್ನಾಟಕ ವಿಶ್ವವಿದ್ಯಾಲಯದ ಗ್ರಂಥಾಲಯ ವಿಜ್ಞಾನ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಎಸ್.ಎಲ್. ಸಂಗಮ, ಬಸವಪ್ರಭು ಹೊಸಕೇರಿ, ಶಂಕರ ಹಲಗತ್ತಿ, ಶೈಲಜಾ ಅಮರಶೆಟ್ಟಿ, ಶಿವಾನಂದ ಭಾವಿಕಟ್ಟಿ, ಶ್ರೀನಿವಾಸ ವಾಡಪ್ಪಿ, ಜಯದೇವ ಹಿರೇಮಠ, ಎಸ್.ಸಿ. ಪಾಟೀಲ, ಎಸ್.ಬಿ. ಪಾಟೀಲ, ಸತ್ಯಾ ಸವಣೂರ, ಶಶಿಕಲಾ ಸಂಗಮ, ಇಂದು ಹಿರೇಮಠ, ಡಿ.ಬಿ. ಬಿರಾದಾರ, ಬಂಕಾಪುರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.