ಧಾರವಾಡ: ವರಕವಿ ದ.ರಾ. ಬೇಂದ್ರೆ ನಿವಾಸದ ರೇಖಾಚಿತ್ರವುಳ್ಳ ಅಂಚೆ ಮೊಹರನ್ನು ಬುಧವಾರ ಅಂಚೆ ಇಲಾಖೆಯ ಕರ್ನಾಟಕ ವೃತ್ತದ ಚೀಫ್ ಪೋಸ್ಟ್‌ಮಾಸ್ಟರ್ ಜನರಲ್ ರಾಜೇಂದ್ರ ಕುಮಾರ್ ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ‘ರಾಜ್ಯದ ಸಾಂಸ್ಕೃತಿಕ ಹಾಗೂ ಸಾಹಿತ್ಯ ಪರಂಪರೆ ಗೌರವಿಸಲು ಅಂಚೆ ಇಲಾಖೆಯು ಶಾಶ್ವತ ರೇಖಾಚಿತ್ರವುಳ್ಳ ರದ್ದತಿ ಮುದ್ರೆಗಳನ್ನು ಬಿಡುಗಡೆ ಮಾಡುತ್ತಿದೆ. ಕರ್ನಾಟಕ ವೃತ್ತದಿಂದ ಈವರೆಗೆ 88 ಪ್ರಮುಖ ವ್ಯಕ್ತಿ, ಸ್ಮಾರಕಗಳ ಮುದ್ರೆ ಬಿಡುಗಡೆಯಾಗಿದೆ’ ಎಂದರು.
ಉತ್ತರ ಕರ್ನಾಟಕ ವಲಯದ ಪೋಸ್ಟ್ ಮಾಸ್ಟರ್ ಜನರಲ್ ಕರ್ನಲ್ ಸುಶೀಲ್‍ಕುಮಾರ್ ಮಾತನಾಡಿ, ‘ರೇಖಾಚಿತ್ರಿವುಳ್ಳ ಮುದ್ರೆ ದಾಖಲೆಗಳು ಪ್ರಾಮುಖ್ಯ ಹೊಂದಿವೆ. ಇವು ದೀರ್ಘ ಕಾಲದವರೆಗೆ ನೆನಪಿನಲ್ಲಿ ಉಳಿಯುತ್ತವೆ’ ಎಂದರು.
ಧಾರವಾಡ ವಿಭಾಗದ ಹಿರಿಯ ಸೂಪರಿಂಟೆಂಡೆಂಟ್ ವೈಭವ ವಾಘಮಾರೆ, ಧಾರವಾಡದ ಅಂಚೆ ಕಚೇರಿಗಳ ಡೆಪ್ಯುಟಿ ಸೂಪರಿಂಟೆಂಡೆಂಟ್ ಎಸ್. ವಿಜಯನರಸಿಂಹ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.