ADVERTISEMENT

ಹುಬ್ಬಳ್ಳಿ: ಹೆಸ್ಕಾಂ ಸಿಬ್ಬಂದಿಗೆ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 27 ಜನವರಿ 2022, 6:31 IST
Last Updated 27 ಜನವರಿ 2022, 6:31 IST
ಹುಬ್ಬಳ್ಳಿಯಲ್ಲಿ ಬುಧವಾರ ನಡೆದ ಗಣರಾಜ್ಯೋತ್ಸವದಂದು ಸಾಧನೆ ಮಾಡಿದ ಹೆಸ್ಕಾಂ ಸಿಬ್ಬಂದಿಗೆ ಸನ್ಮಾನಿಸಲಾಯಿತು
ಹುಬ್ಬಳ್ಳಿಯಲ್ಲಿ ಬುಧವಾರ ನಡೆದ ಗಣರಾಜ್ಯೋತ್ಸವದಂದು ಸಾಧನೆ ಮಾಡಿದ ಹೆಸ್ಕಾಂ ಸಿಬ್ಬಂದಿಗೆ ಸನ್ಮಾನಿಸಲಾಯಿತು   

ಹುಬ್ಬಳ್ಳಿ: ವಿವಿಧ ಯೋಜನೆಗಳನ್ನು ಸಮರ್ಪಕವಾಗಿ ನಿಭಾಯಿಸಿದ್ದಕ್ಕೆ ಹೆಸ್ಕಾಂ ಸಿಬ್ಬಂದಿಗೆ ಬುಧವಾರ ನಡೆದ ಗಣರಾಜ್ಯೋತ್ಸವ ಸಮಯದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ವಿದ್ಯುತ್‌ ರಹಿತ ಮನೆಗಳಿಗೆ ’ಬೆಳಕು ಯೋಜನೆ’ ಅಡಿಯಲ್ಲಿ ವಿದ್ಯುತ್‌ ಸಂಪರ್ಕ ಕಲ್ಪಿಸುವಲ್ಲಿ ಶೇ 100ರಷ್ಟು ಪ್ರಗತಿ ಸಾಧಿಸಿದ್ದಕ್ಕೆ ಸಂತೋಷ ಬಿ. ಪಾಟೀಲ (ಕಾರ್ಯನಿರ್ವಾಹಕ ಎಂಜಿನಿಯರ್‌, ಜಮಖಂಡಿ), ದೈನಂದಿನ ಮಾಪಕ ತಪಾಸಣಾ ಕಾರ್ಯದ ಜೊತೆಗೆ ಹೆಚ್ಚುವರಿಯಾಗಿ ಟಿಒಡಿ ಬಿಲ್ಲಿಂಗ್‌ ತಪ್ಪುಗಳನ್ನು ಪತ್ತೆ ಮಾಡಿ ಕಂಪನಿಗೆ ಆಗುತ್ತಿದ್ದ ₹73 ಲಕ್ಷ ನಷ್ಟ ತಪ್ಪಿಸಿದ್ದಕ್ಕಾಗಿ ಡಿ. ದೀಪಕ (ಎಚ್‌.ಟಿ. ರೇಟಿಂಗ್‌ ಉಪವಿಭಾಗ–1 ಬೆಳಗಾವಿ), ಟೇಬಲ್‌ ಟೆನಿಸ್‌ನಲ್ಲಿ ಸಾಧನೆ ಮಾಡಿದ ಸಂಜೀವ ಜಿ. ಹಮ್ಮಣ್ಣವರ (ಉಪ ವಿಭಾಗ–3 ಬೆಳಗಾವಿ), ಐರನ್‌ ಮ್ಯಾನ್‌ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಹಾಗೂ ಮುಖ್ಯಮಂತ್ರಿ ಪದಕ ಪಡೆದ ಮುರುಗೇಶ ಚನ್ನಣ್ಣವರ (ಜಾಗೃತದಳ ಠಾಣೆಯ ಪೊಲೀಸ್‌ ಇನ್‌ಸ್ಟೆಕ್ಟರ್‌) ಅವರಿಗೆ ಪ್ರಶಸ್ತಿ ನೀಡಲಾಯಿತು.

ಗ್ರಾಹಕರ ವಿದ್ಯುತ್‌ ಸಮಸ್ಯೆಗಳ ದೂರುಗಳನ್ನು ತ್ವರಿತಗತಿಯಲ್ಲಿ ವಿಲೇವಾರಿ ಮಾಡಲು ’ವೆಬ್‌ ಲಿಂಕ್‌ ಬೇಸ್ಡ್‌ ಸಾಫ್ಟವೇರ್‌’ ನಿರ್ವಹಣೆ ಮಾಡಿದ ತಂಡದ ಸದಸ್ಯರಾದ ಸಂಜೀವ ಜಿ. ಹಮ್ಮಣ್ಣವರ, ಸಂಜಯ ಗೊನ್ಸಾಲ್ವೆಸ್‌, ಪವನಕುಮಾರ ಬಿ. ಎಸ್‌. (ನಗರ ಉಪವಿಭಾಗ-3, ಬೆಳಗಾವಿ) ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ADVERTISEMENT

ಐದು 250 ಕೆ.ವಿ.ಎ. ’ಅಸಮತೋಲಿತ ಭಾರ’ದಿಂದ ಆಗುವ ವಿದ್ಯುತ್‌ ನಷ್ಟ ತಗ್ಗಿಸಿ ವಾರ್ಷಿಕ ₹19 ಲಕ್ಷ ಕಂಪನಿಗೆ ಹೆಚ್ಚುವರಿ ಆದಾಯ ತಂದುಕೊಟ್ಟ ನಗರ ಉಪವಿಭಾಗ-3 ಬೆಳಗಾವಿ ತಂಡಕ್ಕೂ ಗೌರವ ಸಲ್ಲಿಸಲಾಯಿತು. ಈ ತಂಡದಲ್ಲಿ ಮಲ್ಲಪ್ಪಾ ಮುಗಡಿಕಟ್ಟಿ, ಜಗದೀಶ ವೈ.‌ ಕೌಜಲಗಿ, ಖಾಲೀದ್‌ ಎ. ಮುಜಾವರ್‌, ಎಸ್‌.ಎಸ್‌ ಪಾಟೀಲ ಮತ್ತು ಮಹೇಶ ಹಿರೇಮಠ ಇದ್ದರು.

ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ಡಿ. ಭಾರತಿ, ನಿರ್ದೇಶಕ (ತಾಂತ್ರಿಕ) ಎ.ಎಚ್‌. ಕಾಂಬ್ಳೆ, ನಿರ್ದೇಶಕ (ಹಣಕಾಸು) ಬಿ. ಮಂಜುನಾಥ, ಪ್ರಧಾನ ವ್ಯವಸ್ಥಾಪಕ (ತಾಂತ್ರಿಕ) ಜೆ.ಎಲ್‌. ಬೆಳಗಲಿ, ಜಾಗೃತದಳದ ಡಿವೈಎಸ್‌ಪಿ ವಿಜಯಕುಮಾರ, ಅಧೀಕ್ಷಕ ಎಂಜಿನಿಯರ್‌ಗಳಾದ ಆರ್‌.ಎಸ್‌. ವರೂರ, ಎಸ್.ಆರ್ ಪಾಟೀಲ ಹಾಗೂ ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.