ADVERTISEMENT

ಜಗದೀಶ ನಗರಕ್ಕೆ ಮೂಲ ಸೌಲಭ್ಯ ಕಲ್ಪಿಸಲು ಮನವಿ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2019, 12:49 IST
Last Updated 19 ಅಕ್ಟೋಬರ್ 2019, 12:49 IST
ಜಗದೀಶ ಶೆಟ್ಟರ್‌
ಜಗದೀಶ ಶೆಟ್ಟರ್‌   

ಹುಬ್ಬಳ್ಳಿ: ವಿಮಾನ ನಿಲ್ದಾಣದ ಹಿಂಭಾಗದಲ್ಲಿರುವ ಜಗದೀಶ ನಗರದ ಆಶ್ರಯ ಮನೆಗಳ ಫಲಾನುಭವಿಗಳಿಗೆ ಹಕ್ಕುಪತ್ರ ನೀಡಬೇಕು, ಮೂಲ ಸೌಲಭ್ಯ ಕಲ್ಪಿಸಬೇಕು ಎಂದು ಜಗದೀಶ ನಗರ ಆಶ್ರಯ ನಿವಾಸಿಗಳ ಹಿತರಕ್ಷಣಾ ಸಮಿತಿ ಪದಾಧಿಕಾರಿಗಳು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್‌ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದ್ದಾರೆ.

2014ನೇ ಸಾಲಿನಲ್ಲಿ ರಾಜ್ಯ ಸರ್ಕಾರದ ಆದೇಶದಂತೆ ಆಶ್ರಯ ಫಲಾನುಭವಿಗಳಿಗೆ ಸಾಲಮನ್ನಾ ಪತ್ರ ನೀಡಬೇಕು, 2015ನೇ ಸಾಲಿನಿಂದ ಹೊಸದಾಗಿ ನಿರ್ಮಿಸುತ್ತಿರುವ 188 ಮನೆಗಳನ್ನು ಪೂರ್ಣಗೊಳಿಸಿ ಫಲಾನಭವಿಗಳಿಗೆ ವಿತರಿಸಬೇಕು ಎಂದು ಆಗ್ರಹಿಸಿದ್ದಾರೆ.

ಹೊಸ ಮನೆಗಳ ನಿರ್ಮಾಣ ಕಾಮಗಾರಿ ತೀರಾ ಕಳಪೆಯಾಗಿದೆ. ಕಟ್ಟಡ ನಿರ್ಮಾಣಕ್ಕೆ ಸರ್ಕಾರದಿಂದ ಜಿಲ್ಲಾಡಳಿತಕ್ಕೆ ಬಂದ ₹8.19 ಕೋಟಿ ದುರ್ಬಳಕೆ ಅಗಿರುವ ಬಗ್ಗೆ ಅನುಮಾನವಿದ್ದು, ಈ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಹಿತರಕ್ಷಣಾ ಸಮಿತಿಯ ಕಾರ್ಯದರ್ಶಿ ಪ್ರೇಮನಾಥ ಚಿಕ್ಕತುಂಬಳ ಒತ್ತಾಯಿಸಿದರು.

ADVERTISEMENT

ಮನವಿ ಸ್ವೀಕರಿಸಿ ಮಾತನಾಡಿದ ಶೆಟ್ಟರ್‌ ‘ಬಡಾವಣೆಗೆ ಸಂಬಂಧಿಸಿದ ಶಾಸಕ ಅರವಿಂದ ಬೆಲ್ಲದ ಜೊತೆ ಮಾತನಾಡಿ ಕ್ರಮ ಜರುಗಿಸುತ್ತೇನೆ’ ಎಂದು ಭರವಸೆ ನೀಡಿದರು.

ಸಮಿತಿಯ ಪದಾಧಿಕಾರಿಗಳಾದ ವೆಂಕಟೇಶ ದೇಸಾಯಿ, ದೀಪಕ ಚವ್ಹಾಣ, ನಾಗರಾಜ ಕ್ಷೌರದ, ಬಸಪ್ಪ ಮಸೂತಿ, ಗಿರೀಶ ಬಳ್ಳಾರಿ, ಕಬೇರಪ್ಪ ಗೌಡರ, ಹನುಮಂತ ಖರಾಡೆ, ಮಂಜುಳಾ ಹಳಪೇರಿ, ಈರಪ್ಪ ಜೋಗಿ, ಗಿರಿಜಾ ಕ್ಯಾಲಕೊಂಡ, ಚನ್ನಮ್ಮ ಪಡೇಸೂರ, ಕಮಲಾ ಹಿತ್ತಲಮನಿ, ಲಕ್ಷ್ಮಿ ಪಾಟೀಲ, ಗಂಗಮ್ಮಾ ಮಣ್ಣೂರಮಠ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.