ADVERTISEMENT

ಹುಬ್ಬಳ್ಳಿ: ಸಂಗೊಳ್ಳಿ ರಾಯಣ್ಣ ಹುತಾತ್ಮ ದಿನಾಚರಣೆ ಇಂದು

​ಪ್ರಜಾವಾಣಿ ವಾರ್ತೆ
Published 25 ಜನವರಿ 2020, 15:08 IST
Last Updated 25 ಜನವರಿ 2020, 15:08 IST

ಹುಬ್ಬಳ್ಳಿ: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹಿತರಕ್ಷಣಾ ಸಮಿತಿಯಿಂದ ರಾಯಣ್ಣನ 189ನೇ ಹುತಾತ್ಮ ದಿನಾಚರಣೆಯನ್ನು ಜ.26ರಂದು ಸಂಜೆ 4ಕ್ಕೆ ಚನ್ನಮ್ಮ ವೃತ್ತದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಶಿವಾನಂದ ಮುತ್ತಣ್ಣವರ ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್‌ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಮಧ್ಯಾಹ್ನ 2.30ರಿಂದ ದೇಶಭಕ್ತಿ ಗೀತೆ, ನಾಡಗೀತೆ ಕಾರ್ಯಕ್ರಮ ಇರಲಿದೆ ಎಂದು ತಿಳಿಸಿದರು.

ADVERTISEMENT

ಶೌರ್ಯ ಪ್ರಶಸ್ತಿ

ಬಿ.ಅರವಿಂದ, ಯಶವಂತ(ಪತ್ರಿಕಾ ರಂಗ), ಸಂದೀಪ ಬೂದಿಹಾಳ, ಸಂತೋಷ ಕೃಷ್ಣಾಪುರ, ಪರಶುರಾಮ ಸತ್ತಿಗೇರಿ, (ಶಿಕ್ಷಣ), ಮಂಜು ಬಳ್ಳಾರಿ, ಮಲ್ಲಪ್ಪ ಪೂಜಾರ, ಸಿದ್ಧಾರೂಢ ಹೂಗಾರ, ಮಲ್ಲಪ್ಪ ಪೂಜಾರಿ(ಕ್ರೀಡೆ), ವಿನೋದ ಮುಕ್ತಿಯಾರ, ನಾಗರಾಜ ಕೇಚಣ್ಣವರ, ಮುತ್ತಪ್ಪ ವೈ.ಲಮಾಣಿ, ಅಶೋಕ ಬಿ.ಎಸ್‌.ಪಿ(ಪೊಲೀಸ್‌), ಮಹಾದೇವ ಭಗವತಿ(ಸಾರಿಗೆ), ಈರಣ್ಣ ಶಿಂತ್ರಿ (ಧಾರ್ಮಿಕ), ಯಲ್ಲಪ್ಪ(ಕಲೆ), ಎಚ್‌.ಸಿ.ಬೇವೂರ(ಆಡಳಿತ), ಡಾ.ಬಿರಾದಾರ(ಆರೋಗ್ಯ), ಅಮ್ಮಿನಬಾವಿ ಅವರಿಗೆ ಸಂಗೊಳ್ಳಿ ರಾಯಣ್ಣ ಶೌರ್ಯ ಪ್ರಶಸ್ತಿ ನೀಡಲಾಗುವುದು ಎಂದು ಹೇಳಿದರು.

ವಿಶೇಷ ಸನ್ಮಾನ

‘ಮದುವೆ ಮಾಡಿದರೆ ಸರಿಹೋಗುವನು’ ಚಲನಚಿತ್ರದ ನಾಯಕ ನಟ ಶಿವಚಂದ್ರ ಕುಮಾರ್, ನಾಯಕಿ ಆರಾಧ್ಯ, ನಿರ್ದೇಶಕಿ ಗೋಪಿ ಕೆರೂರ, ನಿರ್ಮಾಪಕ ಶಿವರಾಜ ದೇಸಾಯಿ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಗುವುದು ಎಂದು ತಿಳಿಸಿದರು.

ಸಮಿತಿಯ ಪದಾಧಿಕಾರಿಗಳಾದ ಮಲ್ಲಿಕಾರ್ಜುನ, ಯಲ್ಲಪ್ಪಣ್ಣ ಕುಂದಗೋಳ, ಗುರುಸಿದ್ದಣ್ಣ ಕಲಘಟಗಿ, ನರೇಶ, ಶಿವರಾಜ ದೇಸಾಯಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.