ರೈಲು
– ಪ್ರಜಾವಾಣಿ ಚಿತ್ರ
ಹುಬ್ಬಳ್ಳಿ: ಸಾಸಲು ರೈಲು ನಿಲ್ದಾಣದಲ್ಲಿ ನವೀಕರಣ ಕಾಮಗಾರಿ ನಡೆಯುವ ಕಾರಣ ರೈಲು ಸೇವೆ ರದ್ದು, ನಿಯಂತ್ರಣ ಹಾಗೂ ಮರುಸಮಯ ನಿಗದಿಪಡಿಸಲಾಗಿದೆ ನೈರುತ್ವ ರೈಲ್ವೆ ಪ್ರಕಟಣೆ ತಿಳಿಸಿದೆ.
ಸೆಪ್ಟೆಂಬರ್ 18ರಂದು ಎಸ್‌ಎಸ್‌ಎಸ್ ಹುಬ್ಬಳ್ಳಿ–ಚಿತ್ರದುರ್ಗ–ಎಸ್‌ಎಸ್‌ಎಸ್ ಹುಬ್ಬಳ್ಳಿ ಎಕ್ಸ್‌ಪ್ರೆಸ್ ರೈಲು (17347/17348) ಸಂಚಾರ ರದ್ದುಪಡಿಸಲಾಗಿದೆ.
ಅಂದು ಬೆಳಗಾವಿ–ಮೈಸೂರು ಎಕ್ಸ್‌ಪ್ರೆಸ್ (17325) ಬೆಳಗಾವಿಯಿಂದ ಹೊರಡುವ ಪ್ರಯಾಣವನ್ನು 1 ಗಂಟೆ 15 ನಿಮಿಷ ಮರುನಿಗದಿ ಮಾಡಲಾಗುತ್ತದೆ. ಮಾರ್ಗಮಧ್ಯೆ 1 ಗಂಟೆ 30 ನಿಮಿಷ ನಿಯಂತ್ರಿಸಲಾಗುತ್ತದೆ. ಮೈಸೂರಿನಿಂದ ಹೊರಡುವ ಮೈಸೂರು–ಬೆಳಗಾವಿ ಎಕ್ಸ್‌ಪ್ರೆಸ್ ರೈಲು (17326) ಸಂಚಾರವನ್ನು ಮಾರ್ಗಮಧ್ಯೆ 2 ಗಂಟೆ 10 ನಿಮಿಷ ನಿಯಂತ್ರಣ ಮಾಡಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.