
ಪ್ರಜಾವಾಣಿ ವಾರ್ತೆ
ಹುಬ್ಬಳ್ಳಿ: ಸೌದಿ ಅರೇಬಿಯಾದ ಬಸ್ ಅವಗಢದಲ್ಲಿ ಮೃತಪಟ್ಟ ಇಲ್ಲಿನ ಗಣೇಶಪೇಟೆ ನಿವಾಸಿ ಅಬ್ದುಲ್ ಗನಿ ಶಿರಹಟ್ಟಿ (52) ಅಂತ್ಯಕ್ರಿಯೆ ಮೆಕ್ಕಾ ಅಥವಾ ಮದೀನಾದಲ್ಲಿ ನಡೆಯಲಿದೆ.
‘ಅಬ್ದುಲ್ ಗನಿ ಅವರ ಪುತ್ರ ಸೇರಿ ಮೂವರು ಮಂಗಳವಾರ ಸಂಜೆ ಹುಬ್ಬಳ್ಳಿಯಿಂದ ಮುಂಬೈಗೆ ತೆರಳಿದ್ದು, ಅಲ್ಲಿಂದ ಸೌದಿ ಅರೇಬಿಯಾಕ್ಕೆ ಹೋಗುವರು’ ಎಂದು ಮೂಲಗಳು ತಿಳಿಸಿವೆ.
‘ಪ್ರಯಾಣಿಕರ ಪಟ್ಟಿ ಮತ್ತು ಸಂಪರ್ಕ ಸಂಖ್ಯೆ ಆಧರಿಸಿ ಕರೆ ಬಂದಿತ್ತು. ಅಲ್ಲಿಗೆ ಹೋಗಿ ಶವ ಗುರುತಿಸಬೇಕು. ಉಮ್ರಾ (ತೀರ್ಥಯಾತ್ರೆ) ವೇಳೆ ಮೃತಪಟ್ಟರೆ, ಮೆಕ್ಕಾ ಅಥವಾ ಮದೀನಾದಲ್ಲೇ ಅಂತ್ಯಕ್ರಿಯೆ ಮಾಡುವುದು ಸಂಪ್ರದಾಯ’ ಎಂದು ಕುಟುಂಬದ ಸದಸ್ಯರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.