ADVERTISEMENT

ಹುಬ್ಬಳ್ಳಿ–ತಿರುಪತಿ ರೈಲು ಪುನರಾರಂಭ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2022, 12:43 IST
Last Updated 14 ಅಕ್ಟೋಬರ್ 2022, 12:43 IST

ಹುಬ್ಬಳ್ಳಿ: ಹುಬ್ಬಳ್ಳಿ–ತಿರುಪತಿ–ಹುಬ್ಬಳ್ಳಿ ವಿಶೇಷ ಪ್ಯಾಸೆಂಜರ್ (07657/07658) ರೈಲನ್ನು ದಕ್ಷಿಣ ಕೇಂದ್ರ ರೈಲ್ವೆಯು ಪುನರಾರಂಭಿಸಿದೆ.

ತಿರುಪತಿಯಿಂದ ಅ.17ರಿಂದ ಸಂಚಾರ ಆರಂಭಿಸುವ ರೈಲು ಬೆಳಿಗ್ಗೆ 6.10ಕ್ಕೆ ಹೊರಟು ರಾತ್ರಿ 9.10ಕ್ಕೆ ಹುಬ್ಬಳ್ಳಿ ತಲುಪಲಿದೆ. ಹುಬ್ಬಳ್ಳಿಯಿಂದ ಅ.18ರಿಂದ ಸಂಚರಿಸುವ ರೈಲು ಬೆಳಿಗ್ಗೆ 6ಕ್ಕೆ ಹೊರಟು ರಾತ್ರಿ 9.50ಕ್ಕೆ ತಿರುಪತಿಗೆ ಹೋಗಲಿದೆ ಎಂದು ನೈರುತ್ಯ ರೈಲ್ವೆಯ ಪ್ರಕಟಣೆ ತಿಳಿಸಿದೆ.

ಡೆಮು ರೈಲು ವಿಸ್ತರಣೆ:ಬಳ್ಳಾರಿ–ಹರಿಹರ ಮತ್ತು ಹೊಸಪೇಟೆ–ಬಳ್ಳಾರಿ ಡೆಮು ವಿಶೇಷ ರೈಲಿನ ಸೇವೆಯನ್ನು ನೈರುತ್ಯ ರೈಲ್ವೆಯು ವಿಸ್ತರಿಸಿದೆ. ಬಳ್ಳಾರಿ–ಹರಿಹರ (07395), ಹರಿಹರ–ಬಳ್ಳಾರಿ(07396) ಹಾಗೂ ಹೊಸಪೇಟೆ–ಬಳ್ಳಾರಿ (07397) ರೈಲಿನ ಸೇವೆಯನ್ನು ಅ.17ರಿಂದ 2023ರ ಏಪ್ರಿಲ್ 14ರವರೆಗೆ ಹಾಗೂ ಹೊಸಪೇಟೆ–ಹುಬ್ಬಳ್ಳಿ (07393) ರೈಲನ್ನು ಅ.22ರಿಂದ 2023ರ ಏಪ್ರಿಲ್ 15ರವರೆಗೆ ಮತ್ತು ಹುಬ್ಬಳ್ಳಿ–ಹೊಸಪೇಟೆ (07394) ರೈಲು ಸೇವೆಯನ್ನು ಅ. 16ರಿಂದ 2023ರ ಏಪ್ರಿಲ್ 9ರವರೆಗೆ ವಿಸ್ತರಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.