
ಹುಬ್ಬಳ್ಳಿ: ಧಾರವಾಡದ ರುಡ್‌ಸೆಟ್ ಸಂಸ್ಥೆ ಮತ್ತು ರೋಟರಿ ಕ್ಲಬ್ ವತಿಯಿಂದ ಹುಬ್ಬಳ್ಳಿಯ ಹೆಬಸೂರ ಭವನದಲ್ಲಿ ಸ್ವ ಉದ್ಯೋಗ ಮಾಹಿತಿ ಕಾರ್ಯಕ್ರಮ ಈಚೆಗೆ ನಡೆಯಿತು.
ರೋಟರಿ ಕ್ಲಬ್ ಆಫ್ ಹುಬ್ಬಳಿಯ ಅಧ್ಯಕ್ಷ ಕಿರಣ ಹೆಬಸೂರ ಮಾತನಾಡಿ, ಯುವಕ, ಯುವತಿಯರು ಸ್ವ–ಉದ್ಯೋಗ ತರಬೇತಿ ಪಡೆದು ಸ್ವಾವಲಂಬಿಗಳಾಗಬೇಕು ಎಂದರು.
ರುಡ್‌ಸೆಟ್ ಸಂಸ್ಥೆಯ ಉಪನ್ಯಾಸಕ ಜಗದೀಶ್ ಪೂಜಾರ್ ಅವರು, ನಿರುದ್ಯೋಗಿ ಯುವಕ, ಯುವತಿಯರಿಗಾಗಿ ಟೈಲರಿಂಗ್, ಬ್ಯೂಟಿ ಪಾರ್ಲರ್, ಹ್ಯಾಂಡ್ ಎಂಬ್ರಾಯಿಡರಿ, ಕೃತಕ ಆಭರಣ ತಯಾರಿಕೆ, ಮೊಬೈಲ್ ಫೋನ್ ರಿಪೇರಿ, ಮೋಟರ್ ರಿವೈಂಡಿಂಗ್, ಹೈನುಗಾರಿಕೆ ಮತ್ತು ಕುರಿ ಸಾಕಾಣಿಕೆ, ಕೋಳಿ ಸಾಕಾಣಿಕೆ, ಸಿಸಿ ಟಿವಿ ಕ್ಯಾಮೆರಾ ರಿಪೇರಿ ಸೇರಿ ವಿವಿಧ ತರಬೇತಿ ನೀಡಲಾಗುತ್ತದೆ ಎಂದು ಹೇಳಿದರು.
ಎರಡನೇ ಬ್ಯಾಚ್‌ನ ತರಬೇತಿ ಫೆ. 30ರ ನಂತರ ಪ್ರಾರಂಭವಾಗಲಿದ್ದು, ಆಸಕ್ತರು ಮೊಬೈಲ್ ಸಂಖ್ಯೆಗೆ (97310 65632, 99720 98121) ಕರೆ ಮಾಡಿ ಹೆಸರು ನೋಂದಾಯಿಸಿಕೊಳ್ಳಬೇಕು ಎಂದರು.
ರುಡ್‌ಸೆಟ್ ಸಂಸ್ಥೆಯ ಮಹೇಶ್ ಗೌಡರ, ರೋಟರಿ ಕ್ಲಬ್ ವೃತ್ತಿಪರ ಸೇವಾ ನಿರ್ದೇಶಕ ಮಂಜುನಾಥ ಹೊಂಬಳ, ನಾರಾಯಣರಾವ್ ತಾತೂಸ್ಕರ, ಮೋಹಿತ ದಂಡ, ಶಿವಾನಂದ ಕರಡಿ, ಬಾಪುಗೌಡ ಬಿರಾದಾರ, ಎಂ.ಕೆ. ಪಾಟೀಲ, ರಿಯಾಜ ಬಸರಿ, ಎ.ವಿ ಸಂಕನೂರ, ಸಿದ್ಧೇಶ್ವರ ಕಮ್ಮಾರ, ಎಸ್.ಬಿ. ಕಡಬಿ, ಬಸವರಾಜ ಕಲ್ಲಾಪುರ, ಕಸ್ತೂರಿ ದೋಣಿಮಠ, ಶೋಭಾ ಮುದ್ದರೆಡ್ಡಿ, ಅಬ್ದುಲ್ ಸಾದಿಕ್, ಸುರೇಂದ್ರ ಪೋರ್ವಾಲ, ಅರವಿಂದ ಕುಬಸದ, ಅಶ್ವಿನ್ ಗುಡಿಸಾಗರ್, ಸಮರ್ಥ್ ರೈಕರ್, ಅಮರ್ ಸೂಜಿ, ಹೇಮಲ್ ಶಾ, ಉಮೇಶ ಗಡಾದ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.