ADVERTISEMENT

‘ಧಾರವಾಡ ಮಹಾನಗರ ಪಾಲಿಕೆ’.. ಸರ್ಕಾರದಿಂದ ಅಧಿಸೂಚನೆ: ಆಕ್ಷೇಪಣೆಗೆ 30 ದಿನ ಸಮಯ

ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆಯನ್ನು ವಿಭಜಿಸಿ ಧಾರವಾಡ ಮತ್ತು ಹುಬ್ಬಳ್ಳಿ ಪ್ರತ್ಯೇಕ ಪಾಲಿಕೆ ರಚನೆ ಅಧಿಸೂಚನೆಯನ್ನು ರಾಜ್ಯಪತ್ರದಲ್ಲಿ (ಗೆಜೆಟ್‌) ಮಂಗಳವಾರ ಪ್ರಕಟಿಸಲಾಗಿದೆ.

​ಪ್ರಜಾವಾಣಿ ವಾರ್ತೆ
Published 22 ಜನವರಿ 2025, 2:16 IST
Last Updated 22 ಜನವರಿ 2025, 2:16 IST
ಧಾರವಾಡ ಪಾಲಿಕೆ ಕಚೇರಿ
ಧಾರವಾಡ ಪಾಲಿಕೆ ಕಚೇರಿ   

ಧಾರವಾಡ: ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆಯನ್ನು ವಿಭಜಿಸಿ ಧಾರವಾಡ ಮತ್ತು ಹುಬ್ಬಳ್ಳಿ ಪ್ರತ್ಯೇಕ ಪಾಲಿಕೆ ರಚನೆ ಅಧಿಸೂಚನೆಯನ್ನು ರಾಜ್ಯಪತ್ರದಲ್ಲಿ (ಗೆಜೆಟ್‌) ಮಂಗಳವಾರ ಪ್ರಕಟಿಸಲಾಗಿದೆ.

ಧಾರವಾಡ ಮಹಾನಗರ ಪಾಲಿಕೆಗೆ 120.94 ಚದರ ಕಿಲೋ ಮೀಟರ್‌ ಹಾಗೂ ಹುಬ್ಬಳ್ಳಿ ಮಹಾನಗರ ಪಾಲಿಕೆಗೆ 127.05 ಚ.ಕಿ.ಮೀ ವ್ಯಾಪ್ತಿ, ಗಡಿ ಪರಿಮಿತಿ ನಿಗದಿಪಡಿಸಲಾಗಿದೆ.

ಧಾರವಾಡ ಪಾಲಿಕೆಯ ವ್ಯಾಪ್ತಿ, ವಿಸ್ತೀರ್ಣ ವಿವರವನ್ನು ‘ಶೆಡ್ಯೂಲ್‌ ಎ1’ನಲ್ಲಿ ಹಾಗೂ ಗಡಿ ಪರಿಮಿತಿ ವಿವರವನ್ನು ‘ಶೆಡ್ಯೂಲ್‌ ಬಿ1’ನಲ್ಲಿ, ಹುಬ್ಬಳ್ಳಿ ಪಾಲಿಕೆಯ ವ್ಯಾಪ್ತಿ, ವಿಸ್ತೀರ್ಣ ವಿವರವನ್ನು ‘ಶೆಡ್ಯೂಲ್‌ ಎ2’ನಲ್ಲಿ ಹಾಗೂ ಗಡಿ ಪರಿಮಿತಿ ವಿವರವನ್ನು ‘ಶೆಡ್ಯೂಲ್‌ ಬಿ2’ನಲ್ಲಿ ನಮೂದಿಸಲಾಗಿದೆ.

ADVERTISEMENT

ಅಧಿಸೂಚನೆ ಕುರಿತು ಆಕ್ಷೇಪಣೆ, ಸಲಹೆ ಸಲ್ಲಿಸಲು 30 ದಿನಗಳ ಕಾಲವಕಾಶ ನೀಡಲಾಗಿದೆ. ನಿರ್ದೇಶಕರು, ಪೌರಾಡಳಿತ ನಿರ್ದೇಶನಾಲಯ, 9ನೇ ಮಹಡಿ, ವಿ.ವಿ ಗೋಪುರ, ಬೆಂಗಳೂರು ವಿಳಾಸಕ್ಕೆ ಲಿಖಿತವಾಗಿ ಸಲ್ಲಿಸಬೇಕು.

ಜ.2ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ರಚನೆಗೆ ಅನುಮೋದನೆ ನೀಡಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.