ADVERTISEMENT

ಮಹದಾಯಿ: ರೈತರ ಮನವಿಗೆ ಶಾ ಸ್ಪಂದನೆಯ ಭರವಸೆ

​ಪ್ರಜಾವಾಣಿ ವಾರ್ತೆ
Published 19 ಜನವರಿ 2020, 11:05 IST
Last Updated 19 ಜನವರಿ 2020, 11:05 IST
ಮಹದಾಯಿ ಹೋರಾಟಗಾರರು ಶನಿವಾರ ಹುಬ್ಬಳ್ಳಿಯಲ್ಲಿ ಅಮಿತ್‌ ಶಾ ಅವರಿಗೆ ಹಸಿರು ಶಾಲು ಹೊದಿಸಿ ಸನ್ಮಾನಿಸಿದರು
ಮಹದಾಯಿ ಹೋರಾಟಗಾರರು ಶನಿವಾರ ಹುಬ್ಬಳ್ಳಿಯಲ್ಲಿ ಅಮಿತ್‌ ಶಾ ಅವರಿಗೆ ಹಸಿರು ಶಾಲು ಹೊದಿಸಿ ಸನ್ಮಾನಿಸಿದರು   

ಹುಬ್ಬಳ್ಳಿ: ಮಹದಾಯಿ ನದಿ ನೀರನ್ನು ಮಲಪ್ರಭೆಗೆ ಹರಿಸುವ ಕಳಸಾ ಬಂಡೂರಿ ನಾಲಾ ಜೋಡಣೆ ಯೋಜನೆ ಕುರಿತು ಕಾಳಜಿ ವಹಿಸುತ್ತೇವೆ; ಈ ಕುರಿತು ಕ್ರಮ ಕೈಗೊಳ್ಳುತ್ತೇವೆ ಎಂದು ತಮ್ಮನ್ನು ಭೇಟಿಯಾದ ಹೋರಾಟಗಾರರಿಗೆ ಅಮಿತ್‌ ಶಾ ಭರವಸೆ ನೀಡಿದ್ದಾರೆ.

ಶಾ ಅವರನ್ನು ಭೇಟಿ ಮಾಡಿಸಲೇಬೇಕು ಎಂದು ಹೋರಾಟಗಾರರು ನಲವಗುಂದ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಅವರಿಗೆ ಒತ್ತಾಯಿಸಿದ್ದರು. ಆದ್ದರಿಂದ ರೈತರಿಗೆ ಶಾ ಭೇಟಿ ಸಾಧ್ಯವಾಯಿತು. ಭೇಟಿಯ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ರೈತ ಮುಖಂಡರು ‘ಶಾ ಸಮಸ್ಯೆಗೆ ಸ್ಪಂದಿಸುವ ಭರವಸೆ ನೀಡಿದ್ದಾರೆ’ ಎಂದರು.

‘ಫಸಲ್‌ ಬೀಮಾ ಯೋಜನೆಯಿಂದ ಬರಬೇಕಾದ ಬಾಕಿ ಹಣ ಬಿಡುಗಡೆ ಮಾಡಬೇಕು. ರಾಜ್ಯದಲ್ಲಿ ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ರೈತರ ಸಂಕಷ್ಟ ಹೆಚ್ಚಾಗಿದೆ. ಇದಕ್ಕೆ ಕೇಂದ್ರ ಸ್ಪಂದಿಸಬೇಕು ಎಂದು ಮನವಿ ಮಾಡಿದ್ದೇವೆ’ ಎಂದು ತಿಳಿಸಿದರು.‌

ADVERTISEMENT

ಹೋರಾಟಗಾರರಾದ ಸುಭಾಷಚಂದ್ರ ಪಾಟೀಲ, ಮಲ್ಲೇಶ ಉಪ್ಪಾರ, ಸಂಗಪ್ಪ ನುಡವಣಿ, ಹಳ್ಳದ, ಭಗವಾನ್‌ ಪುಟ್ಟಣ್ಣ, ಸಿದ್ಧಲಿಂಗಪ್ಪ ಹಳ್ಳದ ಇದ್ದರು.

ಅಸಮಾಧಾನ

ಹುಬ್ಬಳ್ಳಿಯಲ್ಲಿ ಇತ್ತೀಚಿಗೆ ಎಲ್ಲ ಪಕ್ಷಗಳ ಜನಪ್ರತಿನಿಧಿಗಳು ಸೇರಿ ಮಹದಾಯಿ ವಿವಾದ ಬಗ್ಗೆ ಚರ್ಚಿಸಿದ್ದರು. ಈಗಲೂ ಎಲ್ಲ ಪಕ್ಷಗಳ ನಾಯಕರು ಒಂದಾಗಿ ಶಾ ಅವರಿಗೆ ಮನವಿ ಸಲ್ಲಿಸಿದ್ದರೆ ಹೆಚ್ವು ಪರಿಣಾಮಕಾರಿಯಾಗುತ್ತಿತ್ತು. ಆದರೆ ಈ ನಿಟ್ಟಿನಲ್ಲಿ ಯಾರೂ ಪ್ರಯತ್ನಿಸಲಿಲ್ಲ ಎಂದು ಹೋರಾಟಗಾರರು ‌ಬೇಸರ‌ ವ್ಯಕ್ತಪಡಿಸಿದರು.

ಬಸವರಾಜ ಹೊರಟ್ಟಿ ಅವರ ನೇತೃತ್ವದ ತಂಡವು ಶಾ ಅವರನ್ನು ಭೇಟಿ ಮಾಡುವುದಾಗಿ ಹೇಳಿತ್ತು. ಸಚಿವ ಪ್ರಹ್ಲಾದ ಜೋಶಿ ಅವರನ್ನು ಶಾ ಅವರನ್ನು ಭೇಟಿ ಮಾಡಿಸುವಂತೆ ಕೇಳಿದ್ದೇವೆ ಎಂದು ತಿಳಿಸಿತ್ತು. ಜೋಶಿ ಅವರ ಸಲಹೆ ಮೇರೆಗೆ ಭೇಟಿ ಮಾಡಿಲ್ಲ ಎಂದು ತಿಳಿದು ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.