ADVERTISEMENT

‘ಶಕ್ತಿಯೋಜನೆ: ₹674 ಕೋಟಿ ಬಾಕಿ’

​ಪ್ರಜಾವಾಣಿ ವಾರ್ತೆ
Published 18 ಜೂನ್ 2025, 15:25 IST
Last Updated 18 ಜೂನ್ 2025, 15:25 IST
ರಾಜು ಕಾಗೆ
ರಾಜು ಕಾಗೆ   

ಹುಬ್ಬಳ್ಳಿ: ‘ಶಕ್ತಿ’ ಯೋಜನೆಗೆ ಸಂಬಂಧಿಸಿದಂತೆ ಮೇ 2025ರವರೆಗೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಸರ್ಕಾರದಿಂದ ₹674 ಕೋಟಿ ಬಾಕಿ ಬರಬೇಕಿದೆ’ ಎಂದು ಶಾಸಕ ಹಾಗೂ ಸಂಸ್ಥೆಯ ಅಧ್ಯಕ್ಷ ರಾಜು ಕಾಗೆ ಹೇಳಿದರು. 

‘ಸಂಸ್ಥೆಯ ವ್ಯಾಪ್ತಿಯ ಜಿಲ್ಲೆಗಳಲ್ಲಿ ಜೂನ್‌ 2023ರಿಂದ ಮೇ 2025ರವರೆಗೆ ಶಕ್ತಿ ಯೋಜನೆಯಡಿ ₹2,915 ಕೋಟಿ ವೆಚ್ಚವಾಗಿದೆ. ಇದರಲ್ಲಿ ₹2,241 ಕೋಟಿ ಮಾತ್ರ ಮರುಪಾವತಿ ಆಗಿದೆ’ ಎಂದು ಅವರು ಬುಧವಾರ ಸುದ್ದಿಗಾರರಿಗೆ ತಿಳಿಸಿದರು.

‘ಸಂಸ್ಥೆಗೆ ಕಿತ್ತೂರು ಕರ್ನಾಟಕ ರಸ್ತೆ ಸಾರಿಗೆ (ಕೆಕೆಆರ್‌ಟಿಸಿ) ಎಂದು ಹೆಸರಿಡುವ ಉದ್ದೇಶವಿತ್ತು. ಆದರೆ, ಸರ್ಕಾರದ ಅನುದಾನ ತಪ್ಪಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ (ಕೆಕೆಆರ್‌ಟಿಸಿ) ಹೋಗುವ ಸಾಧ್ಯತೆಯಿದೆ. ಅದಕ್ಕಾಗಿ, ಈಗ ರಾಣಿ ಚನ್ನಮ್ಮ ಸಾರಿಗೆ ಸಂಸ್ಥೆ ಎಂದು ಹೆಸರಿಡಲು ಚಿಂತನೆ ನಡೆದಿದೆ’  ಎಂದು ತಿಳಿಸಿದರು. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.