
ಹುಬ್ಬಳ್ಳಿ: ‘ವಂದೇ ಮಾತರಂ ಮತ್ತು ಜನಗಣಮನ ಎರಡೂ ರಾಷ್ಟ್ರಗೀತೆಗಳಾಗಿದ್ದು, ಅವುಗಳಿಗೆ ಅಪಮಾನಿಸುವ ಕೆಲಸ ಯಾರೂ ಮಾಡಬಾರದು’ ಎಂದು ಸಂಸದ ಜಗದೀಶ್ ಶೆಟ್ಟರ್ ಇಲ್ಲಿ ಹೇಳಿದರು.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ವಂದೇ ಮಾತರಂ ಗೀತೆ ಸ್ವಾತಂತ್ರ್ಯ ಹೋರಾಟಕ್ಕೆ ಸ್ಫೂರ್ತಿ ಆಗಿದ್ದರೆ, ಸಂವಿಧಾನದ ಪ್ರಕಾರ ಜನಗಣಮನ ಅಧಿಕೃತ ರಾಷ್ಟ್ರಗೀತೆಯಾಗಿದೆ’ ಎಂದು ಹೇಳಿದರು.
‘ಈ ಎರಡೂ ಗೀತೆಗಳಿಗೆ ಅದರದ್ದೇ ಆದ ಗೌರವವಿದ್ದು, ಈ ಬಗ್ಗೆ ಚರ್ಚಿಸುವುದು ಅನಗತ್ಯ’ ಎಂದರು.
‘ಬಿಜೆಪಿಯಲ್ಲಿ ಆಂತರಿಕ ಕಲಹವಿಲ್ಲ. ಪಕ್ಷದ ರಾಜ್ಯಾಧ್ಯಕ್ಷರ ಬದಲಾವಣೆ ಎನ್ನುವುದು ಊಹಾಪೋಹ. ಮೂರು ವರ್ಷಕ್ಕೊಮ್ಮೆ ಅಧ್ಯಕ್ಷರ ಬದಲಾವಣೆ ಇರುತ್ತದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
‘ಬೆಂಗಳೂರಿನ ಕೇಂದ್ರ ಕಾರಾಗೃಹದಲ್ಲಿ ಉಗ್ರರಿಗೆ ರಾಜಾತಿಥ್ಯ ಕುರಿತ ಪ್ರಶ್ನೆಗೆ, ‘ಲಷ್ಕರ್ ಉಗ್ರರೇ ಇರಲಿ, ಉಮೇಶ ರೆಡ್ಡಿಯೇ ಇರಲಿ ರಾಜಾತಿಥ್ಯ ಕೈಬಿಟ್ಟು, ಅಧಿಕಾರಿಗಳ ವಿರುದ್ಧ ಕ್ರಮಜರುಗಿಸಲಿ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.