ಕುಂದಗೋಳ: ತಾಲ್ಲೂಕಿನ ರಾಮನಕೊಪ್ಪ ಗ್ರಾಮದ ಹರಿಮಂದಿರ ದೇವಸ್ಥಾನದ ಬಳಿ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿ ಪ್ರತಿಷ್ಠಾಪನೆ ಭಾನುವಾರ ಜರುಗಿತು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಷಣ್ಮುಖ ಶಿವಳ್ಳಿ ಅವರು ಶಿವಾಜಿ ಮೂರ್ತಿಗೆ ಮಾಲೆ ಹಾಕಿ ನಮನ ಸಲ್ಲಿಸಿ, ‘ಇಂತಹ ಮಹನೀಯರ ಆದರ್ಶ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳೋಣ’ ಎಂದರು.
‘ಮರಾಠ ಸಮಾಜದ ಮುಂಖಡರು ಕೆಲವು ಬೇಡಿಕೆಗಳನ್ನು ಇಟ್ಟಿದ್ದಾರೆ. ನನಗೆ ನಿಮ್ಮ ಆಶೀರ್ವಾದವಿದ್ದರೆ ಸದಾ ನಿಮ್ಮ ಸಮಾಜದ ಜೊತೆ ನಾವು ಇರುತ್ತೇವೆ’ ಎಂದು ಭರವಸೆ ನೀಡಿದರು.
ಗ್ರಾಮ ಪಂಚಾಯಿತಿ ಸದಸ್ಯ ವಿಠ್ಠಲ ಕುರಾಡೆ ಮಾತನಾಡಿ, ‘ಶಿವಾಜಿ ಮೂರ್ತಿ ಗ್ರಾಮದಲ್ಲಿ ಪ್ರತಿಷ್ಠಾಪನೆ ಮಾಡಬೇಕೆಂಬುದು ಬಹಳ ದಿನಗಳ ಬೇಡಿಕೆಯಾಗಿತ್ತು. ಗ್ರಾಮದ ರಾಣಪ್ಪ ಪೀರಪ್ಪ ಕುರಾಡೆಯವರು ಭೂದಾನ ಮಾಡಿದ್ದು, ಅಲ್ಲಿ ₹5 ಲಕ್ಷ ವೆಚ್ಚದಲ್ಲಿ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದೇವೆ. ಇದಕ್ಕೆ ಗ್ರಾಮದ ಗುರು- ಹಿರಿಯರು, ಯುವ ಮಿತ್ರರ ಸಹಕಾರ ಇದೆ’ ಎಂದರು.
ಭೂದಾನಿ ರಾಣಪ್ಪ ಕುರಾಡೆ ಅವರಿಗೆ ಷಣ್ಮುಖ ಶಿವಳ್ಳಿ ಸನ್ಮಾನಿಸಿದರು.
ಸಮಾಜದ ತಾಲ್ಲೂಕು ಅಧ್ಯಕ್ಷ ವಿಠ್ಠಲ ಚವ್ಹಾಣ, ಪ್ರಭುಗೌಡ ಸಂಖ್ಯಾಗೌಡಶಾನಿ, ಮಂಜುನಾಥ ಮಂಡೇಕಾರ, ದೇವಪ್ಪ ಜೈನರ, ಚನ್ನಪ್ಪಗೌಡ ಪಾಟೀಲ, ಮಾಬುಸಾಬ ನದಾಫ, ನಿಂಗಪ್ಪ ಕುರಾಡೆ, ಕಾಡಪ್ಪ ಜಠಾರ, ತೆಂಬನಗೌಡ್ರು ಪಾಟೀಲ, ಕಾಡಪ್ಪ ಮಾದರ, ಸಹದೇವಪ್ಪ ಗಾವಡೆ, ಸೋಮಪ್ಪಾ ಕಟಾವಿ, ಸಿದ್ದಪ್ಪಾ ಮೋರೆ, ಶೆಕು ಗಾವಡೆ, ನಿಂಗಪ್ಪ ಜಠಾರ, ಬಸಪ್ಪಾ ಸಂಭೋಜಿ, ಶಿವಾಜಿ ಘೋರ್ಪಡೆ, ಬಸವರಾಜ ಪಡವಳ್ಳಿ, ಸೋಮಪ್ಪಾ ಭೋಸಲೆ, ರಮೇಶಗೌಡ ಪಾಟೀಲ್, ಗೋವಿಂದ ಘೋರ್ಪಡೆ, ದೇವಪ್ಪ ಮಂಡೇಕಾರ, ನಾಗಯ್ಯ ಭಾವಿ, ಶಿವಪುತ್ರ ಸುತಗಟ್ಟಿ, ಪರಸಪ್ಪ ಮಂಡೇಕಾರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.