ADVERTISEMENT

ಅಳ್ನಾವರ | ಶಿವಾನಂದ ಹಿರೇಮಠ ಪೆನಲ್‌ಗೆ ಜಯ

​ಪ್ರಜಾವಾಣಿ ವಾರ್ತೆ
Published 20 ಜನವರಿ 2026, 5:43 IST
Last Updated 20 ಜನವರಿ 2026, 5:43 IST
ಅಳ್ನಾವರ ಸಮೀಪದ ಡೋರಿ ಗ್ರಾಮದ ಅರವಟಗಿ ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಸಹಕಾರ ಸಂಘದ ಚುನಾವಣೆಯಲ್ಲಿ ಜಯಗಳಿಸಿದ ನೇಗಿಲಯೋಗಿ ಪೆನಲ್ ಅಭ್ಯರ್ಥಿಗಳು ವಿಜಯೋತ್ಸವ ಆಚರಿಸಿದರು 
ಅಳ್ನಾವರ ಸಮೀಪದ ಡೋರಿ ಗ್ರಾಮದ ಅರವಟಗಿ ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಸಹಕಾರ ಸಂಘದ ಚುನಾವಣೆಯಲ್ಲಿ ಜಯಗಳಿಸಿದ ನೇಗಿಲಯೋಗಿ ಪೆನಲ್ ಅಭ್ಯರ್ಥಿಗಳು ವಿಜಯೋತ್ಸವ ಆಚರಿಸಿದರು    

ಅಳ್ನಾವರ: ಸಮೀಪದ ಡೋರಿ ಗ್ರಾಮದ ಅರವಟಗಿ ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಸಹಕಾರ ಸಂಘದ ನಿರ್ದೇಶಕ ಮಂಡಳಿಗೆ ಭಾನುವಾರ ನಡೆದ ಚುನಾವಣೆಯಲ್ಲಿ‌ ಸಂಘದ ಹಿಂದಿನ ಅಧ್ಯಕ್ಷ ಶಿವಾನಂದ ಹಿರೇಮಠ ನೇತೃತ್ವದ ನೇಗಿಲಯೋಗಿ ಪೆನಲ್‌ನ 11 ಅಭ್ಯರ್ಥಿಗಳು ಗೆಲುವು ಸಾಧಿಸಿದರು.

ತೀವ್ರ ಪೈಪೋಟಿ ನೀಡಿದ ರೈತ ಮಿತ್ರ ಪೆನಲ್‌ನಿಂದ ಅಶೋಕ ಜೋಡಟ್ಟಿಯವರ ಮಾತ್ರ ಜಯಗಳಿಸಿದರು. 12 ಸ್ಥಾನಗಳಿಗೆ ಒಟ್ಟು 36 ಅಭ್ಯರ್ಥಿಗಳು ಕಣದಲ್ಲಿದ್ದರು.

ವಿಜೇತರು: ನೇಗಿಲಯೋಗಿ ಪೆನಲ್‍ನ ಶಿವಾನಂದ ಹಿರೇಮಠ, ಗಂಗಾಧರ ಬುಡರಕಟ್ಟಿ,
ಸೈಯದ್‍ಸಾಬ ತೇಗೂರ, ರೇಣುಕಾ ಬೊಕನೇಕರ, ಸರಸ್ವತಿ ದಾಸ್ತಿಕೊಪ್ಪ, ಸುರೇಶ ಕೋಲಕಾರ, ರತ್ಮವ್ವ ಹರಿಜನ್, ಗಂಗಯ್ಯ ಚಿಕ್ಕಮಠ,
ಚನ್ನಬಸಯ್ಯ ಹಿರೇಮಠ, ಮಂಜುನಾಥ ಪಾಟೀಲ, ವಾಸುದೇವ ಕಲ್ಲಾಪೂರ. 

ADVERTISEMENT

ಸಾಮಾನ್ಯ ಸಾಲಗಾರರ ಕ್ಷೇತ್ರದಿಂದ ರೈತ್‍ಮಿತ್ರ ಪೆನಲ್‍ನ ಅಶೋಕ ಜೋಡಟ್ಟಿಯವರ ಹ್ಯಾಟ್ರಿಕ್ ಸಾಧನೆ ಮಾಡಿದರು.

ನೇಗಿಲಯೋಗಿ ತಂಡದ ಅಭ್ಯರ್ಥಿಗಳು ವಿಜಯೋತ್ಸವ ಆಚರಿಸಿದರು. ಅಭಿಮಾನಿಗಳು ಪಟಾಕಿ ಸಿಡಿಸಿ, ಗುಲಾಲ್‌ ಎರಚಿ, ಸಿಹಿ ಹಂಚಿ ಸಂಭ್ರಮಿಸಿದರು.

ಶಿವಾನಂದ ಹಿರೇಮಠ ಮಾತನಾಡಿ, ಸಂಘದ ಸದಸ್ಯರ ಹಿತ ಕಾಪಾಡಲಾಗುವುದು. ಹೆಚ್ಚುವರಿ ಸಾಲ ನೀಡುವ ಗುರಿ ಇದೆ. ಶೇ 3ರ ಬಡ್ಡಿ ದರದಲ್ಲಿ ಟ್ರ್ಯಾಕ್ಟರ್ ಖರೀದಿ, ಹೈನುಗಾರಿಕೆ ಮತ್ತು ಕುರಿ ಸಾಕಾಣಿಕೆ, ತಂತಿಬೇಲಿ ಅಳವಡಿಕೆ, ಪೈಪ್‌ಲೈನ್, ಭೂಮಿ ಸಮತಟ್ಟು ಮಾಡಲು ಸಾಲ ವಿತರಣೆ ಜತೆಗೆ ಕೆಸಿಸಿ ಬ್ಯಾಂಕ್ ನೀಡುವ ಸಾಲ ಸೌಲಭ್ಯ ದೊರಕಿಸಿಕೊಡಲು ಪ್ರಯತ್ನ ಮಾಡಲಾಗುವುದು ಎಂದರು.

ಚುನಾವಣಾಧಿಕಾರಿಯಾಗಿ ಸಲೀಂ ಮುಲ್ಲಾ ಕಾರ್ಯನಿರ್ವಹಿಸಿದರು.

ಅಳ್ನಾವರ ಸಮೀಪದ ಡೋರಿ ಗ್ರಾಮದ ಅರವಟಗಿ ವಿವಿದೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಸಹಕಾರ ಸಂಘದ ಚುನಾವಣೆಯಲ್ಲಿ ವಿಜೇತ ನೇಗಿಲಯೋಗಿ ಪೆನಲ್ ಅಭ್ಯರ್ಥಿಗಳು ವಿಜಯೋತ್ಸವ ಆಚರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.