ಹುಬ್ಬಳ್ಳಿ: ‘ಕಾದಂಬರಿಕಾರ, ತತ್ವಜ್ಞಾನಿಯೂ ಆಗಿದ್ದ ದಿ.ಎಸ್.ಎಲ್.ಭೈರಪ್ಪ ಅವರ ವ್ಯಕ್ತಿತ್ವವು ವಿದ್ಯಾರ್ಥಿಗಳಿಗೆ ದಾರಿದೀಪವಾಗಿದೆ’ ಎಂದು ಪೊಲೀಸ್ ಅಧಿಕಾರಿ ಸೋಮು ರೆಡ್ಡಿ ಹೇಳಿದರು.
ಇಲ್ಲಿನ ಕಾಡಸಿದ್ಧೇಶ್ವರ ಮಹಾವಿದ್ಯಾಲಯ ಹಾಗೂ ಎಚ್.ಎಸ್.ಕೋತಂಬ್ರಿ ವಿಜ್ಞಾನ ಸಂಸ್ಥೆಯಲ್ಲಿ ಗುರುವಾರ ಏರ್ಪಡಿಸಿದ್ದ ‘ಭಾವ-ನಮನ’ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಭೈರಪ್ಪ ಅವರು ಗೊಡ್ಡು ಸಂಪ್ರದಾಯ, ಆಚರಣೆಗಳಿಗೆ ಮನ್ನಣೆ ಕೊಡದೆ, ವೈಚಾರಿಕ ಮತ್ತು ವೈಜ್ಞಾನಿಕ ದೃಷ್ಟಿಕೋನ ಹೊಂದಿದ್ದರು. ಅವರು ಸರಳತೆ ಮತ್ತು ವಾಸ್ತವಿಕ ಘಟನೆಗಳಿಗೆ ಬದ್ಧರಾಗಿದ್ದರು’ ಎಂದರು.
ಅಂಕಣಕಾರ ಜನಮೇಜಯ ಉಮರ್ಜಿ ಮಾತನಾಡಿ, ‘ಭೈರಪ್ಪ ಅವರ ಯಾನ, ಆವರಣ, ಮಂದ್ರ, ದಾಟು ಮುಂತಾದ ಕಾದಂಬರಿಗಳಲ್ಲಿ ಸಮಾಜಮುಖಿ ಚಿಂತನೆ ಎದ್ದು ಕಾಣುತ್ತದೆ. ಅವರ ಕಾದಂಬರಿಗಳು ಹೆಚ್ಚು ಮುದ್ರಣ ಕಂಡಿದ್ದು, ಅವುಗಳಲ್ಲಿನ ಸಾಹಿತ್ಯಿಕ ಮೌಲ್ಯಯನ್ನು ಎತ್ತಿ ತೋರಿಸುತ್ತದೆ’ ಎಂದು ತಿಳಿಸಿದರು.
ಕನ್ನಡ ವಿಭಾಗದ ನಿವೃತ್ತ ಮುಖ್ಯಸ್ಥೆ ವಿಜಯಶ್ರೀ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಚಾರ್ಯೆ ಸುಮಂಗಲಾ ಬಿ. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ವಿಭಾಗದ ಮುಖ್ಯಸ್ಥ ಆರ್.ಐ.ಹರಕುಣಿ, ಕನ್ನಡ ವಿಭಾಗದ ಕಾರ್ಯದರ್ಶಿ ಪ್ರದೀಪ ವಾಲೀಕಾರ, ರಮೇಶಗೌಡ ಕೊಟ್ರಗೌಡರ, ಲಕ್ಷ್ಮೀ ಕರೆಣ್ಣವರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.