ಹುಬ್ಬಳ್ಳಿ: ‘ಸೌರ ಮೇಲ್ಚಾವಣಿಗಳು ಕಡಿಮೆ ವೆಚ್ಚ, ಪರಿಣಾಮಕಾರಿ ಮತ್ತು ಪರಿಸರ ಸ್ನೇಹಿ ಶಕ್ತಿಯ ಮೂಲವಾಗಿರುವುದರಿಂದ ನಿರ್ವಹಣಾ ವೆಚ್ಚವನ್ನು ಕಡಿಮೆ ಮಾಡಲು ಬಯಸುವ ವಾಣಿಜ್ಯ ಮತ್ತು ಕೈಗಾರಿಕಾ ವ್ಯವಹಾರಗಳಿಗೆ ಆಕರ್ಷಕ ಆಯ್ಕೆಯಾಗಿದೆ’ ಎಂದು ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ಎಸ್.ಪಿ. ಸಂಶಿಮಠ ಅಭಿಪ್ರಾಯಪಟ್ಟರು.
ಸಂಸ್ಥೆಯ ಸಭಾಂಗಣದಲ್ಲಿ ಮರ್ಕಾಮ್ ಇಂಡಿಯಾ ಸಹಯೋಗದೊಂದಿಗೆ ಶುಕ್ರವಾರ ನಡೆದ ಸಿ&ಐ ಕ್ಲೀನ್ ಎನರ್ಜಿ ಮೀಟ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ವಾಣಿಜ್ಯ ಮತ್ತು ಕೈಗಾರಿಕಾ (ಸಿ&ಐ) ಘಟಕಗಳು, ದೊಡ್ಡ ಸಂಸ್ಥೆಗಳು ಮತ್ತು ವಸತಿ ಅಪಾರ್ಟಮೆಂಟ್ ಕಟ್ಟಡಗಳು ಗ್ರಿಡ್ ವಿದ್ಯುತ್ ಸುಂಕಗಳಿಗಿಂತ ಕಡಿಮೆ ವೆಚ್ಚದಲ್ಲಿ ಶುದ್ಧ ವಿದ್ಯುತ್ ಅನ್ನು ಬಯಸುತ್ತವೆ. ಅದಕ್ಕೆ ಪರಿಹಾರವೆಂಬಂತೆ ಸೌರ ವಿದ್ಯುತ್ ಒದಗಿಬಂದಿದೆ’ ಎಂದು ತಿಳಿಸಿದರು.
ಗೌರವ ಕಾರ್ಯದರ್ಶಿ ರವೀಂದ್ರ ಎಸ್. ಬಳಿಗಾರ, ಮರ್ಕಾಮ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕಿ ಪ್ರಿಯಾ ಸಂಜಯ, ಪ್ರವೀಣ ಅಗಡಿ, ಮಹೇಂದ್ರ ಸಿಂಘಿ, ವೀರಣ್ಣ ಕಲ್ಲೂರ, ಶಾಂತರಾಜ ಪೋಳ, ಸುಭಾಸ ಬಾಗಲಕೋಟಿ, ಅಶೋಕ ತಡಸದ, ಸದಾನಂದ ಕಾಮತ, ವಿಶಾಲ ಜೈನ್, ಮಂಜುನಾಥ ಹೆಗಡೆ, ಪರಶುರಾಮ ಮಿಸ್ಕಿನ, ಜಯಪ್ರಕಾಶ ಟೆಂಗಿನಕಾಯಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.