ADVERTISEMENT

ರಾಜ್ಯದ ಪ್ರಮುಖ ನಗರಗಳ ನಡುವೆ ವಿಶೇಷ ರೈಲುಗಳ ನಿಯಮಿತ ಸಂಚಾರಕ್ಕೆ ಅನುಮೋದನೆ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2025, 5:26 IST
Last Updated 29 ಅಕ್ಟೋಬರ್ 2025, 5:26 IST
<div class="paragraphs"><p>ರೈಲು</p></div>

ರೈಲು

   

– ಪ್ರಜಾವಾಣಿ ಚಿತ್ರ

ಹುಬ್ಬಳ್ಳಿ: ಕರ್ನಾಟಕದ ಪ್ರಮುಖ ನಗರಗಳ ನಡುವೆ ಪ್ರಯಾಣಿಕರ ಸಂಚಾರಕ್ಕೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ವಿಶೇಷ ರೈಲುಗಳ ನಿಯಮಿತ ಸಂಚಾರಕ್ಕೆ ರೈಲ್ವೆ ಮಂಡಳಿ ಅನುಮೋದನೆ ನೀಡಿದೆ.

ADVERTISEMENT

07339/ 07340 ಸಂಖ್ಯೆಯ ಎಸ್ಎಸ್ಎಸ್ ಹುಬ್ಬಳ್ಳಿ–ಕೆಎಸ್‌ಆರ್ ಬೆಂಗಳೂರು–ಎಸ್ಎಸ್ಎಸ್ ಹುಬ್ಬಳ್ಳಿ ಸೂಪರ್‌ಫಾಸ್ಟ್ ವಿಶೇಷ ಎಕ್ಸ್‌ಪ್ರೆಸ್ ರೈಲುಗಳನ್ನು 20687/ 20688 ಸಂಖ್ಯೆಯ ಎಸ್ಎಸ್ಎಸ್ ಹುಬ್ಬಳ್ಳಿ–ಕೆಎಸ್‌ಆರ್ ಬೆಂಗಳೂರು– ಎಸ್ಎಸ್ಎಸ್ ಹುಬ್ಬಳ್ಳಿ ದೈನಂದಿನ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಎಂದು ನಿಯಮಿತಗೊಳಿಸಲಾಗುತ್ತದೆ.

20687 ಸಂಖ್ಯೆಯ ರೈಲು ಡಿಸೆಂಬರ್ 8ರಿಂದ ರಾತ್ರಿ 11.15ಕ್ಕೆ ಎಸ್ಎಸ್ಎಸ್ ಹುಬ್ಬಳ್ಳಿ ನಿಲ್ದಾಣದಿಂದ ಹೊರಟು ಮರುದಿನ ಬೆಳಿಗ್ಗೆ 6.50ಕ್ಕೆ ಕೆಎಸ್‌ಆರ್ ಬೆಂಗಳೂರು ನಿಲ್ದಾಣ ತಲುಪಲಿದೆ. 20688 ಸಂಖ್ಯೆಯ ರೈಲು ಡಿಸೆಂಬರ್ 9ರಿಂದ ರಾತ್ರಿ 11.55ಕ್ಕೆ ಕೆಎಸ್‌ಆರ್ ಬೆಂಗಳೂರಿನಿಂದ ಹೊರಟು ಮರುದಿನ ಬೆಳಿಗ್ಗೆ 7.30ಕ್ಕೆ ಎಸ್ಎಸ್ಎಸ್ ಹುಬ್ಬಳ್ಳಿ ನಿಲ್ದಾಣ ತಲುಪಲಿದೆ.

ಈ ರೈಲುಗಳು 1 ಎಸಿ 2 ಟೈರ್, 1 ಎಸಿ 3 ಟೈರ್, 11 ಸ್ಲೀಪರ್ ಕ್ಲಾಸ್, 4 ಜನರಲ್ ಸೆಕೆಂಡ್ ಕ್ಲಾಸ್ ಮತ್ತು 2 ಎಸ್ಎಲ್‌ಆರ್‌ಡಿ ಬೋಗಿಗಳನ್ನು ಒಳಗೊಂಡಿದೆ. ಎಸ್‌ಎಂಎಂ ಹಾವೇರಿ, ರಾಣೆಬೆನ್ನೂರು ಮೊದಲಾದ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ.

06545/ 06546 ಸಂಖ್ಯೆಯ ಯಶವಂತಪುರ–ವಿಜಯಪುರ–ಯಶವಂತಪುರ ವಿಶೇಷ ಎಕ್ಸ್‌ಪ್ರೆಸ್ ರೈಲುಗಳನ್ನು 16547/ 16548 ಸಂಖ್ಯೆಯ ಯಶವಂತಪುರ–ವಿಜಯಪುರ–ಯಶವಂತಪುರ ದೈನಂದಿನ ಎಕ್ಸ್‌ಪ್ರೆಸ್ ಎಂದು ನಿಯಮಿತಗೊಳಿಸಲಾಗುತ್ತದೆ.

16547 ಸಂಖ್ಯೆಯ ರೈಲು ಡಿಸೆಂಬರ್ 8ರಿಂದ ರಾತ್ರಿ 9.30ಕ್ಕೆ ಯಶವಂತಪುರದಿಂದ ಹೊರಟು ಮರುದಿನ ಬೆಳಿಗ್ಗೆ 11.25ಕ್ಕೆ ವಿಜಯಪುರ ತಲುಪಲಿದೆ. 16548 ಸಂಖ್ಯೆಯ ರೈಲು ಡಿಸೆಂಬರ್ 9ರಿಂದ ಮಧ್ಯಾಹ್ನ 1.50ಕ್ಕೆ ವಿಜಯಪುರದಿಂದ ಹೊರಟು ಮರುದಿನ ಮುಂಜಾನೆ 5.10ಕ್ಕೆ ಯಶವಂತಪುರ ತಲುಪಲಿದೆ.

ಈ ರೈಲುಗಳು 1 ಎಸಿ 3 ಟೈರ್, 4 ಸ್ಲೀಪರ್ ಕ್ಲಾಸ್, 6 ಜನರಲ್ ಸೆಕೆಂಡ್ ಕ್ಲಾಸ್, ಮತ್ತು 2 ಎಸ್‌ಎಲ್‌ಆರ್‌ಡಿ ಬೋಗಿಗಳನ್ನು ಒಳಗೊಂಡಿದೆ. ಹರಪನಹಳ್ಳಿ, ಕೊಟ್ಟೂರು, ಹಗರಿಬೊಮ್ಮನಹಳ್ಳಿ, ಮರಿಯಮ್ಮನಹಳ್ಳಿ, ಹೊಸಪೇಟೆ, ಗದಗ, ಮಲ್ಲಾಪುರ, ಹೊಳೆಆಲೂರು, ಬಾದಾಮಿ, ಗುಳೇದಗುಡ್ಡ ರೋಡ್, ಬಾಗಲಕೋಟೆ, ಆಲಮಟ್ಟಿ ಮತ್ತು ಬಸವನಬಾಗೇವಾಡಿ ರೋಡ್ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.