ಹುಬ್ಬಳ್ಳಿ: ಶಬರಿಮಲೆಗೆ ಹೋಗುವ ಭಕ್ತರ ಅನುಕೂಲಕ್ಕಾಗಿ ನೈರುತ್ಯ ರೈಲ್ವೆ ವಿಶೇಷ ರೈಲುಗಳ ವ್ಯವಸ್ಥೆ ಮಾಡಿದ್ದು, ಭಕ್ತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಭಾರತೀಯ ಅಯ್ಯಪ್ಪ ಸೇವಾ ಸಂಘದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶಿವಪ್ಪ ಗುಡ್ಡಪ್ಪ ಬಾರ್ಕಿ ಹೇಳಿದರು.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿಸೆಂಬರ್ 2ರಿಂದ 20ರವರೆಗೆ ಪ್ರತಿ ಶನಿವಾರ ಹುಬ್ಬಳ್ಳಿಯಿಂದ ಕೊಟ್ಟಾಯಂಗೆ (ರೈಲು ಸಂಖ್ಯೆ 07305) ಮತ್ತು ಕೊಟ್ಟಾಯಂನಿಂದ ಹುಬ್ಬಳ್ಳಿಗೆ (07306) ಡಿ.3ರಿಂದ ಜನವರಿ 21ರವರೆಗೆ ಪ್ರತಿ ಭಾನುವಾರ ರೈಲು ಸಂಚರಿಸಲಿದೆ ಎಂದರು.
ಹುಬ್ಬಳ್ಳಿಯಿಂದ ಕೊಟ್ಟಾಯಂಗೆ (07307) ಪ್ರತಿ ಮಂಗಳವಾರ ಡಿ.5ರಿಂದ ಜ.16ರವರೆಗೆ ಮತ್ತು ಕೊಟ್ಟಾಯಂನಿಂದ ಹುಬ್ಬಳ್ಳಿಗೆ (07308) ಪ್ರತಿ ಬುಧವಾರ ಡಿ.6ರಿಂದ ಜನ17ವರೆಗೆ ವಿಶೇಷ ರೈಲುಗಳು ಸಂಚರಿಸಲಿವೆ ಎಂದು ತಿಳಿಸಿದರು.
ಕಳೆದ ವರ್ಷ ವಿಜಯಪುರ, ಬೆಳಗಾವಿಯಿಂದ ವಿಶೇಷ ರೈಲು ಓಡಿಸಿದಾಗ ಜನರಿಂದ ಉತ್ತಮ ಸ್ಪಂದನೆ ಸಿಗಲಿಲ್ಲ. ಹೀಗಾಗಿ ಈ ರೈಲುಗಳನ್ನು ರದ್ದುಪಡಿಸಲಾಗಿದೆ ಎಂದರು.
ಆನಂದ ಗುರುಸ್ವಾಮಿ, ಮೋಹನ್ ಗುರುಸ್ವಾಮಿ, ಬಸವರಾಜ ನೇವನೂರ, ಮುತ್ತಪ್ಪ ಅಂಬಿಗೇರ, ಮಹೇಶ ಶೆಟ್ಟರ್, ಹನುಮಂತ ಗೌಡರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.