ಅಮ್ಮಿನಬಾವಿ (ಉಪ್ಪಿನಬೆಟಗೇರಿ): ’ಅಧ್ಯಾತ್ಮ, ಪ್ರವಚನ ಆಲಿಸುವುದರಿಂದ ಮನಸ್ಸಿಗೆ ಶಾಂತಿ, ನೆಮ್ಮದಿ ದೊರಕುತ್ತದೆ’ ಎಂದು ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಧಾರವಾಡ ತಾಲ್ಲೂಕಿನ ಅಮ್ಮಿನಬಾವಿ ಗ್ರಾಮದ ಪಂಚಗೃಹ ಹಿರೇಮಠದಲ್ಲಿ ಭಕ್ತ ಸಮೂಹ ಬುಧವಾರ ಹಮ್ಮಿಕೊಂಡಿದ್ದ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿಯವರ 92ನೆಯ ವರ್ಧಂತಿ ಮಹೋತ್ಸವದಲ್ಲಿ ಮಾತನಾಡಿದರು.
ಮೊರಬ ಜಡಿಮಠದ ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಶಾಂತಲಿಂಗ ಶಿವಾಚಾರ್ಯರು ಶಿವಯೋಗ ಸಾಧನೆಯಲ್ಲಿ ತೊಡಗಿಸಿಕೊಂಡು ಕಿರಿಯರಿಗೆ ಗುರುಪರಂಪರೆಯ ಮಾರ್ಗದರ್ಶಕರಾಗಿ ಉಪದೇಶ ಮಾಡಿದ್ದಾರೆ ಎಂದರು.
ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು. ಶೋಭಾ ಯರಗಂಬಳಿಮಠ, ಪ್ರೇಮಾ ಶಿವಪ್ಪ ರುದ್ರಾಪೂರ, ಬಿ.ಸಿ. ಕೊಳ್ಳಿ, ಪವನಕುಮಾರ ಮಲ್ಲಿಕಾರ್ಜುನ ಕುಸೂಗಲ್ಲ, ಸುನೀಲ ಗುಡಿ, ಬಸಪ್ಪ ಉಗರಗೋಳ, ವಿಜಯನಗರ ಜಿಲ್ಲೆ ಹೊಳಗುಂದಿಯ ಗುರುಬಸವರಾಜ ಮತ್ತೂರಮಠ, ಅಕ್ಕಮಹಾದೇವಿ ಯರಗಂಬಳಿಮಠ, ಎಸ್.ಎಂ. ಪ್ರಶಾಂತ ರಾಜಗುರು ಹಾಗೂ ತಿಮ್ಮಾಪೂರ ಭಕ್ತರು ಸಕ್ಕರೆ, ಬೆಲ್ಲ, ಅಕ್ಕಿ, ತೆಂಗಿನಕಾಯಿ, ರವೆ ಮತ್ತು ನಾಣ್ಯಗಳಿಂದ ಶ್ರೀಗಳ ತುಲಾಭಾರ ಹಾಗೂ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ನೆರವೇರಿಸಿದರು.
ಸುರೇಂದ್ರ ದೇಸಾಯಿ, ಎಂ.ಸಿ. ಹುಲ್ಲೂರ, ಉಮೇಶ ಶಿರಕೋಳ, ಅಪ್ಪಣ್ಣ ದೇಶಪಾಂಡೆ, ಮಲ್ಲಪ್ಪ ಕುಸುಗಲ್ಲ, ಶಿವಪ್ಪ ಹಂಚಿನಾಳ, ಬಸಣ್ಣ ಯಡಳ್ಳಿ, ರಾಮಣ್ಣ ಜಕ್ಕಣ್ಣವರ, ಶಾಂತಾದೇವಿ ಪುರಾಣಮಠ, ಪಿ.ಎಸ್. ಪತ್ರಾವಳಿ, ಟಿ.ಎಂ.ದೇಸಾಯಿ, ರುದ್ರಮ್ಮ ಬಸಯ್ಯ ಗುಡಿ, ವಿನಾಯಕ ಹಿರೇಮಠ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.