ADVERTISEMENT

ಸಹಕಾರಿ ಬ್ಯಾಂಕ್‌ಗಳಿಂದ ಆರ್ಥಿಕತೆ ಸದೃಢ: ಜಗದೀಶ ಶೆಟ್ಟರ್‌

​ಪ್ರಜಾವಾಣಿ ವಾರ್ತೆ
Published 23 ಜೂನ್ 2022, 3:05 IST
Last Updated 23 ಜೂನ್ 2022, 3:05 IST
ಹುಬ್ಬಳ್ಳಿಯ ಹೊಸಕಿಲ್ಲಾದಲ್ಲಿ ಬುಧವಾರ ಆಯೋಜಿಸಿದ್ದ ದಿ ದೈವಜ್ಞ ಬ್ರಾಹ್ಮಣ ಸುವರ್ಣಕಾರ ಕೋ–ಆಪ್‌ ಕ್ರೆಡಿಟ್ ಸೊಸೈಟಿ ಲಿಮಿಟೆಡ್‌ನ ನೂತನ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಸ್ವಾಮೀಜಿ, ಶಾಸಕ ಜಗದೀಶ ಶೆಟ್ಟರ್‌ ಭಾಗವಹಿಸಿದ್ದರು 
ಹುಬ್ಬಳ್ಳಿಯ ಹೊಸಕಿಲ್ಲಾದಲ್ಲಿ ಬುಧವಾರ ಆಯೋಜಿಸಿದ್ದ ದಿ ದೈವಜ್ಞ ಬ್ರಾಹ್ಮಣ ಸುವರ್ಣಕಾರ ಕೋ–ಆಪ್‌ ಕ್ರೆಡಿಟ್ ಸೊಸೈಟಿ ಲಿಮಿಟೆಡ್‌ನ ನೂತನ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಸ್ವಾಮೀಜಿ, ಶಾಸಕ ಜಗದೀಶ ಶೆಟ್ಟರ್‌ ಭಾಗವಹಿಸಿದ್ದರು    

ಹುಬ್ಬಳ್ಳಿ: ‘ದೈವಜ್ಞ ಬ್ರಾಹ್ಮಣ ಸಮುದಾಯದವರು ಪ್ರಜ್ಞಾವಂತರಾಗಿದ್ದು, ಸಮುದಾಯದ ಯುವಕರು ಆರ್ಥಿಕವಾಗಿ ಮತ್ತಷ್ಟು ಸದೃಢರಾಗಬೇಕು’ ಎಂದು ಶಾಸಕ ಜಗದೀಶ ಶೆಟ್ಟರ್‌ ಸಲಹೆ ನೀಡಿದರು.

ಇಲ್ಲಿನ ಹೊಸಕಿಲ್ಲಾದಲ್ಲಿ ದಿ ದೈವಜ್ಞ ಬ್ರಾಹ್ಮಣ ಸುವರ್ಣಕಾರ ಕೋ–ಆಪ್‌ ಕ್ರೆಡಿಟ್ ಸೊಸೈಟಿ ಲಿಮಿಟೆಡ್‌ನ ನೂತನ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಈ ಬ್ಯಾಂಕ್‌ ಸಮಾಜದವರಿಗೆ ಆರ್ಥಿಕ ಶಕ್ತಿ ನೀಡಿದೆ. ಸಹಕಾರಿ ಬ್ಯಾಂಕ್‌ಗಳಿಂದ ಸಮಾಜದಲ್ಲಿ ಒಗ್ಗಟ್ಟುಮೂಡಿಸಲು ಸಾಧ್ಯವಿದೆ. ಬೆಳಗಾವಿ, ವಿಜಯಪುರ, ಬಾಗಲಕೋಟೆ ವ್ಯಾಪ್ತಿಯ ಕೆಲವು ಸಹಕಾರಿ ಬ್ಯಾಂಕ್‌ಗಳಿಗೆ ಅಲ್ಪ ಪ್ರಮಾಣದಲ್ಲಿ ಹಿನ್ನಡೆಯಾಗುತ್ತಿದ್ದು, ಸಹಕಾರ ಕೊರತೆಯೇ ಇದಕ್ಕೆ ಕಾರಣ. ಸಹಕಾರಿ ಬ್ಯಾಂಕ್‌ಗಳು ಅಭಿವೃದ್ಧಿಯಾದರೆ, ನೂರಾರು ಜನರಿಗೆ ಸಹಾಯವಾಗಲಿದೆ’ ಎಂದು ಅಭಿಪ್ರಾಯಪಟ್ಟರು. ‌

ADVERTISEMENT

ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಸ್ವಾಮೀಜಿಸಾನ್ನಿಧ್ಯ ವಹಿಸಿದ್ದರು. ಬ್ಯಾಂಕಿನ ಅಧ್ಯಕ್ಷ ಸತೀಶ ಶೇಜವಾಡಕರ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ಆಯಿಲ್‌ ಇಂಡಿಯಾ ಲಿಮಿಟೆಡ್‌ ನಿರ್ದೇಶಕ ರಾಜು ರೇವಣಕರ, ದೈವಜ್ಞ ವಿದ್ಯಾವರ್ಧಕ ಸಂಘದ ಅಧ್ಯಕ್ಷ ವಿಜಯ ವೆರ್ಣೇಕರ, ಹು–ಧಾ ಮಹಾನಗರ ಪಾಲಿಕೆ ಸದಸ್ಯೆ ಪೂಜಾ ಶೇಜವಾಡಕರ, ಆರ್‌.ಟಿ.ಪೋಳ, ವಿಷ್ಣು ರಾಯ್ಕರ, ಮಹೇಶ ಶೇಟ್‌, ಪ್ರೇಮಾಭಟ್‌, ಶೈಲಾಶೇಟ್, ಅಮೃತ ಜನ್ನು, ರಮೇಶ ರಾಯ್ಕರ, ಗೋವಿಂದರಾಜ ಹರ್ಡೇಕರ, ಉದಯ ವೆರ್ಣೇಕರ, ವೆಂಕಟೇಶ ಕುರ್ಡೇಕರ, ಮಂಜುನಾಥ ವೆರ್ಣೇಕರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.