ADVERTISEMENT

ಧಾರವಾಡ: ‘ರಾಜ್ಯದ ಹೊರಗಿನ ಕನ್ನಡಿಗರ ಹಿತರಕ್ಷಣೆಗಾಗಿ ಬೆಂಬಲಿಸಿ’

​ಪ್ರಜಾವಾಣಿ ವಾರ್ತೆ
Published 21 ಮೇ 2025, 13:03 IST
Last Updated 21 ಮೇ 2025, 13:03 IST
ಸುವರ್ಣಾ ಸುರಕೋಡ
ಸುವರ್ಣಾ ಸುರಕೋಡ   

ಧಾರವಾಡ: ಕರ್ನಾಟಕ ವಿದ್ಯಾವರ್ಧಕ ಸಂಘದ ಚುನಾವಣೆಗೆ ಸ್ಪರ್ಧಿಸಿದ್ದೇನೆ. ಮತದಾರರು ಬೆಂಬಲ ನೀಡಬೇಕು ಎಂದು ಕಾರ್ಯಕಾರಿ ಸಮಿತಿ ಮಹಿಳಾ ಮೀಸಲು ಸ್ಥಾನದ ಅಭ್ಯರ್ಥಿ ಸುವರ್ಣಾ ಸುರಕೋಡ ಮನವಿ ಮಾಡಿದರು. 

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 20 ವರ್ಷಗಳಿಂದ ಸಂಘದ ಒಡನಾಟ ಇದೆ.  ಸಂಘದ ಕಾನೂನು ಮಂಟಪ, ಶಿಕ್ಷಣ ಮಂಟಪ ಸದಸ್ಯೆಯಾಗಿ ಕಾರ್ಯನಿರ್ವಹಿಸಿದ್ದೇನೆ. ಕಾರ್ಯಕಾರಿ ಸಮಿತಿ ಸದಸ್ಯೆಯಾಗಿ ಕಾರ್ಯನಿರ್ವಹಿಸಲು ಮತದಾರರು ಅವಕಾಶ  ನೀಡಬೇಕು ಎಂದು ಕೋರಿದರು. 

ಸಂಘದ ಏಳಿಗೆಗೆ ಶ್ರಮಿಸುವ, ನಾಡು, ನುಡಿಗಾಗಿ ಹೋರಾಡುವ, ಕಲಾವಿದರಿಗೆ ನೆರವು ಕಲ್ಪಿಸುವ, ಸಾಹಿತಿಗಳು ಮತ್ತು ಕಲಾವಿದರಿಗೆ ವೇದಿಕೆ ಕಲ್ಪಿಸುವ, ಹೊರನಾಡು ಮತ್ತು ಗಡಿನಾಡಿನ ಕನ್ನಡಿಗರನ್ನು ರಕ್ಷಿಸುವ ಉದ್ದೇಶ ಹೊಂದಿದ್ದೇನೆ ಎಂದರು. 

ADVERTISEMENT

ಕಾರ್ಯಕಾರಿ ಸಮಿತಿ ಸಾಮಾನ್ಯದ ಸದಸ್ಯ ಸ್ಥಾನದ ಅಭ್ಯರ್ಥಿ ಸಿ.ಎನ್. ಹಿರೇಮಠ ಮಾತನಾಡಿ, ಸಂಘವನ್ನು ರಾಜಕೀಯ ಮುಕ್ತವಾಗಿಸುವ ಮತ್ತು ಪಾರದರ್ಶಕ ಆಡಳಿತ ನಡೆಸುವ ಉದ್ದೇಶ. ಕನ್ನಡ ಶಾಲೆಗಳನ್ನು ಉಳಿಸಲು, ಸರೋಜಿನಿ ಮಹಿಷಿ ವರದಿ ಜಾರಿಗೆ ಹೋರಾಟ ಮಾಡುತ್ತೇನೆ. ಮತದಾರರು ಬೆಂಬಲ ನೀಡಬೇಕು ಎಂದರು.

ಸಂಜೀವ ದಮ್ಮಕನಾಳ, ಹನುಮಾಕ್ಷಿ ಗೋಗಿ, ಮಲ್ಲಮ್ಮ ಭಜಂತ್ರಿ ಸುದ್ದಿಗೋಷ್ಠಿಯಲ್ಲಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.