ಧಾರವಾಡ: ಜಿಲ್ಲೆಯ ಎಲ್ಲ ನಗರ, ಪಟ್ಟಣ ಹಾಗೂ ಗ್ರಾಮಗಳಲ್ಲಿ ಪರಿಶಿಷ್ಟ ಜಾತಿ ಕುಟುಂಬಗಳ ಸಮೀಕ್ಷೆ ನಡೆಯುತ್ತಿದೆ. ಪರಿಶಿಷ್ಟ ಜಾತಿಯ ಎಲ್ಲ ಕುಟುಂಬಗಳ ಸಮೀಕ್ಷೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ತಿಳಿಸಿದರು.
ನಗರದ ವಿವಿಧೆಡೆ ಸಮೀಕ್ಷೆ ಕಾರ್ಯ ಪ್ರಗತಿ ಪರಿಶೀಲಿಸಿ ಮಾತನಾಡಿದರು. ಸಮೀಕ್ಷೆ ಕಾರ್ಯನಿರ್ವಹಿಸುವವರು ಎಲ್ಲ ಅಂಶಗಳನ್ನು ಸರಿಯಾಗಿ ದಾಖಲಿಸಬೇಕು ಎಂದು ಹೇಳಿದರು.
ಸಮೀಕ್ಷಾ ಕಾರ್ಯಕ್ಕೆ 7 ನೋಡಲ್ ಅಧಿಕಾರಿಗಗಳು, 10 ಜಿಲ್ಲಾ ತಾಂತ್ರಿಕ ಸಲಹೆಗಾರರು, ಮೂವರು ಜಿಲ್ಲಾ ಮಾಸ್ಟರ್ ಟ್ರೇನರ್, ತಾಲ್ಲೂಕುಮಟ್ಟದಲ್ಲಿ 35 ತಾಲ್ಲೂಕು ಮಾಸ್ಟರ್ ಟ್ರೇನರ್, 1,665 ಗಣತಿದಾರರು ಮತ್ತು 167 ಮೇಲ್ವಿಚಾರರನ್ನು ನೇಮಿಸಲಾಗಿದೆ.
ಧಾರವಾಡ ನಗರ ನೋಡಲ್ ಅಧಿಕಾರಿ ಅಶೋಕ ಸಿಂದಗಿ, ಸಮನ್ವಯ ಅಧಿಕಾರಿ ಮಂಜುನಾಥ ಅಡಮೇರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.