ADVERTISEMENT

ಈಜುಕೊಳ ಉದ್ಘಾಟನೆ ನಾಳೆ

ಸ್ಮಾರ್ಟ್‌ ಸಿಟಿ ಯೋಜನೆಯಲ್ಲಿ ನವೀಕರಣ

​ಪ್ರಜಾವಾಣಿ ವಾರ್ತೆ
Published 3 ಜನವರಿ 2020, 15:43 IST
Last Updated 3 ಜನವರಿ 2020, 15:43 IST
ಹುಬ್ಬಳ್ಳಿಯಲ್ಲಿ ‌ಸ್ಮಾರ್ಟ್‌ ಸಿಟಿ ಯೋಜನೆಯಲ್ಲಿ ನವೀಕರಣಗೊಂಡ ಪಾಲಿಕೆಯ ಈಜುಕೊಳ
ಹುಬ್ಬಳ್ಳಿಯಲ್ಲಿ ‌ಸ್ಮಾರ್ಟ್‌ ಸಿಟಿ ಯೋಜನೆಯಲ್ಲಿ ನವೀಕರಣಗೊಂಡ ಪಾಲಿಕೆಯ ಈಜುಕೊಳ   

ಹುಬ್ಬಳ್ಳಿ: ಬರೋಬ್ಬರಿ ಎರಡು ವರ್ಷಗಳ ಹಿಂದೆ ಮುಚ್ಚಿದ್ದ ಪಾಲಿಕೆಯ ಈಜುಕೊಳ ಈಗ ಸ್ಮಾರ್ಟ್‌ ಸಿಟಿ ಯೋಜನೆಯಲ್ಲಿ ನವೀಕರಣಗೊಂಡಿದ್ದು, ಭಾನುವಾರ (ಜ.5) ಉದ್ಘಾಟನೆಯಾಗಲಿದೆ.

ಡೈವಿಂಗ್‌ ಸೌಲಭ್ಯ ಹೊಂದಿರುವ ಉತ್ತರ ಕರ್ನಾಟಕದ ಏಕೈಕ ಈಜುಕೊಳ ಎನ್ನುವ ಹೆಗ್ಗಳಿಕೆ ಹೊಂದಿರುವ ಇಲ್ಲಿನ ಈಜುಕೊಳವನ್ನು ನೀರಿನ ಅಭಾವ ಹಾಗೂ ನವೀಕರಣದ ಕಾರಣಕ್ಕಾಗಿ 2018ರ ಜನವರಿಯಲ್ಲಿ ಮುಚ್ಚಲಾಗಿತ್ತು. ಈಗ ₹3.03 ಕೋಟಿ ವೆಚ್ಚದಲ್ಲಿ ನವೀಕರಣಗೊಂಡಿದೆ. ಅಂದಾಜು ಆರು ಲಕ್ಷ ಬ್ರಿಟನ್‌ ಗ್ಯಾಲನ್‌ (27.2 ಲಕ್ಷ ಲೀಟರ್‌) ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ.

ಸ್ಮಾರ್ಟ್‌ ಸಿಟಿ ಯೋಜನೆಯಲ್ಲಿ ಚಿಟಗುಪ್ಪಿ ಆಸ್ಪತ್ರೆಯಲ್ಲಿ ₹3.6 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಸ್ಟಾರ್ಟ್‌ ಹೆಲ್ತ್‌, ಲ್ಯಾಮಿಂಗ್ಟನ್‌ ಬಾಲಕ ಹಾಗೂ ಬಾಲಕಿಯರ ಶಾಲೆಯಲ್ಲಿ ₹1.17 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಸ್ಮಾರ್ಟ್‌ ಸ್ಕೂಲ್‌ ಯೋಜನೆಗಳ ಉದ್ಘಾಟನೆ ಕೂಡ ಇದೇ ವೇಳೆ ಜರುಗಲಿದೆ.

ADVERTISEMENT

ಇದೇ ವೇಳೆ ಬೆಂಗೇರಿ ಮಾರುಕಟ್ಟೆ, ಉಣಕಲ್‌ ಮಾರುಕಟ್ಟೆ, ಬಹುವಾಹನಗಳ ನಿಲುಗಡೆ ಮತ್ತು ಪುಟಾಣಿ ರೈಲು ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.