ಕುಂದಗೋಳ : ತಾಲ್ಲೂಕಿನಲ್ಲಿ ಮೈಕ್ರೋ ಫೈನಾನ್ಸನವರು ಅನೇಕ ಗ್ರಾಹಕರಿಗೆ ಮಾನಸಿಕ ಕಿರುಕುಳ ನೀಡುತ್ತಿರುವ ಹಿನ್ನೆಲೆ ತಹಶಿಲ್ದಾರ ರಾಜು ಮಾವರಕರ ಅಧಿಕಾರಿಗಳ ಸಭೆ ನಡೆಸಿದರು.
ಕುಂದಗೋಳ: ತಾಲ್ಲೂಕಿನಲ್ಲಿ ಮೈಕ್ರೋ ಫೈನಾನ್ಸ್‌ವರು ಅನೇಕ ಗ್ರಾಹಕರಿಗೆ ಮಾನಸಿಕ ಕಿರುಕುಳ ನೀಡುತ್ತಿರುವ ಹಿನ್ನೆಲೆ ಅಧಿಕಾರಿಗಳ ಸಭೆ ಕರೆದು ಸರ್ಕಾರದ ನಿಯಮಾವಳಿಯನ್ನು ಕಟ್ಟು ನಿಟ್ಟಗಿ ಪಾಲಿಸಬೇಕು ಎಂದು ತಹಶೀಲ್ದಾರ್ ರಾಜು ಮಾವರಕರ ಸೂಚಿಸಿದರು.
ತಹಶೀಲ್ದಾರ್ ಕಚೇರಿಯಲ್ಲಿ ಬುಧವಾರ ಸಭೆ ನಡೆಸಿ ತಾಲ್ಲೂಕಿನ ಸಂಶಿ ಗ್ರಾಮದ ಮಹಿಳೆಯರು ಮನವಿ ನೀಡಿದ್ದು, ಗ್ರಾಹಕರಿಗೆ ಶಕ್ತಿ ಅನುಸಾರವಾಗಿ ಸಾಲ ವಿತರಿಸಬೇಕು, ಅನೇಕ ಮೈಕ್ರೊ ಫೈನಾನ್ಸ್ ಒಬ್ಬರಿಗೆ ಒಟ್ಟು ₹ 17 ಲಕ್ಷ ಸಾಲ ವಿತರಿಸಿದ್ದೀರಿ ಅವರು ಹೇಗೆ ಮರಳಿ ಪಾವತಿಸುತ್ತಾರೆ. ಸಾಲ ವಿತರಿಸುವಾಗ ಆರ್ಥಿಕ ಸ್ಥಿತಿ ಅನುಸಾರ ಸಾಲ ನೀಡಬೇಕು. ನೀವು ಯಾವ ಮಾನದಂಡ ಆಧಾರಿಸಿ ಸಾಲ ನೀಡಿದ್ದೀರಿ ಎಂದು ಪ್ರಶ್ನಿಸಿದರು.
ಈ ರೀತಿ ಸಾಲ ನೀಡಿದರೆ ಅವರು ಪಾವತಿ ಮಾಡುವುದಾದರೂ ಹೇಗೆ. ಯಾವುದೇ ತೊಂದರೆ ನೀಡದೇ ಕಾಲಾವಕಾಶ ನೀಡಬೇಕು ಎಂದು ಸೂಚನೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.