ADVERTISEMENT

ಶಿಕ್ಷಕರು ಸಮಾಜ ರೂಪಿಸುವ ಶಿಲ್ಪಿಗಳು: ಶಾಸಕ ಮಹೇಶ ಟೆಂಗಿನಕಾಯಿ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2025, 6:57 IST
Last Updated 1 ಅಕ್ಟೋಬರ್ 2025, 6:57 IST
ಚೇತನ ಸಮೂಹ ಸಂಸ್ಥೆ ವತಿಯಿಂದ ಹುಬ್ಬಳ್ಳಿಯ ಸವಾಯಿ ಗಂಧರ್ವ ಕಲಾ ಮಂದಿರದಲ್ಲಿ ಮಂಗಳವಾರ ಏರ್ಪಡಿಸಿದ್ದ ಕಾರ್ಯಕ್ರಮಲ್ಲಿ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು 
ಚೇತನ ಸಮೂಹ ಸಂಸ್ಥೆ ವತಿಯಿಂದ ಹುಬ್ಬಳ್ಳಿಯ ಸವಾಯಿ ಗಂಧರ್ವ ಕಲಾ ಮಂದಿರದಲ್ಲಿ ಮಂಗಳವಾರ ಏರ್ಪಡಿಸಿದ್ದ ಕಾರ್ಯಕ್ರಮಲ್ಲಿ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು    

ಹುಬ್ಬಳ್ಳಿ: ‘ಶಿಕ್ಷಕರು ಸಮಾಜ ರೂಪಿಸುವ ನಿಜವಾದ ಶಿಲ್ಪಿಗಳು. ಇಂದಿನ ಮಕ್ಕಳನ್ನು ಶ್ರೇಷ್ಠ ನಾಗರಿಕರನ್ನಾಗಿ ರೂಪಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ’ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.

ದ್ಯಾವಪ್ಪನವರ ಕೊರವಿ ಸಿದ್ನಾಳ್ ಎಜುಕೇಷನ್ ಟ್ರಸ್ಟ್‌ನ ಚೇತನ ಸಮೂಹ ಸಂಸ್ಥೆ ವತಿಯಿಂದ ನಗರದ ಸವಾಯಿ ಗಂಧರ್ವ ಕಲಾ ಮಂದಿರದಲ್ಲಿ ಮಂಗಳವಾರ ಏರ್ಪಡಿಸಿದ್ದ‘ಶಿಕ್ಷಕ ವಿಕಾಸ ಪ್ರಶಸ್ತಿ’ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು. 

‘ಶಿಕ್ಷಕರಿಗೆ ‍ಪ್ರಶಸ್ತಿ ನೀಡಿ ಸನ್ಮಾನಿಸುವುದು ಸಮಾಜದ ಮೌಲ್ಯಗಳಿಗೆ ಗೌರವ ಸಲ್ಲಿಸಿದಂತೆ. ವಿದ್ಯಾರ್ಥಿಗಳು ಸ್ವಷ್ಟ ಗುರಿ ಇಟ್ಟುಕೊಂಡು ಕಠಿಣ ಪರಿಶ್ರಮದೊಂದಿಗೆ ಸಾಧನೆ ಮಾಡಬೇಕು’ ಎಂದರು.

ADVERTISEMENT

ಧಾರವಾಡದ ಕಿಮ್ಸ್‌ನ ನಿವೃತ್ತ ನಿರ್ದೇಶಕ ಎ.ಎಚ್. ಚಚಡಿ, ‘ಶಿಕ್ಷಕರು ಕೇವಲ ಪಾಠ ಮಾಡುವವರಲ್ಲ. ಅವರು ವಿದ್ಯಾರ್ಥಿಗಳ ಜೀವನಕ್ಕೆ ದಾರಿ ತೋರಿಸುವ ದೀಪಗಳಿದ್ದಂತೆ’ ಎಂದು ಅಭಿಪ್ರಾಯಪಟ್ಟರು.

ಮನಶಾಸ್ತ್ರಜ್ಞ ಡಾ. ಆನಂದ್ ಪಾಂಡುರಂಗಿ, ‘ಶಿಕ್ಷಕರು ಬೋಧನೆ ಜತೆಗೆ ಮಕ್ಕಳಲ್ಲಿ ಆತ್ಮವಿಶ್ವಾಸ, ಸೃಜನಶೀಲತೆ ಮತ್ತು ಮಾನವೀಯ ಗುಣ ಬೆಳೆಸುವ ಮಹತ್ವದ ಪಾತ್ರ ನಿಭಾಯಿಸುತ್ತಿದ್ದಾರೆ. ಈ ಪ್ರಶಸ್ತಿ ಇನ್ನಷ್ಟು ಶಿಕ್ಷಕರಿಗೆ ಪ್ರೇರಣೆ ನೀಡಲಿ’ ಎಂದರು.

ಅಧ್ಯಕ್ಷತೆ ವಹಿಸಿದ್ದ ಚೇತನ ಬಿಸಿನೆಸ್ ಸ್ಕೂಲ್‌ನ ನಿರ್ದೇಶಕ ವಿಶ್ವನಾಥ ಎಂ. ಕೊರವಿ, ‘ಶಿಕ್ಷಕರ ಪರಿಶ್ರಮ, ತ್ಯಾಗ ಮತ್ತು ಶ್ರೇಷ್ಠ ಸೇವೆ ಗೌರವಿಸುವುದು ಎಲ್ಲರ ಹೊಣೆ’ ಎಂದು ಹೇಳಿದರು.

110 ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಂತೋಷ ಹಲಕುರಕಿ, ಮನೀಷ್ ಜೈನ್, ಅಥರ್ ಶೇಖ್, ನಾಗರಾಜ ಮಿರಜಕರ, ಜಗದೀಶ ದ್ಯಾವಪ್ಪನವರ, ಅಶೋಕ್ ಆರ್.ವಡಕಣ್ಣವರ, ಕೆ. ಸಿ. ಪಾಂಗಿ,  ಶಿಲ್ಪಾ ಕುಲಕರ್ಣಿ (ಜಡಿಮಠ), ನಿಧಿ ದೇಶಪಾಂಡೆ,  ಶರತ್ ರಾಯರ್, ಪ್ರೊ. ಗೌರಿ ಬುಲ್ಲಣ್ಣವರ, ಭಾರತಿ ಬಡಿಗೇರ, ಪ್ರೊ.ವೀಣಾ, ಪ್ರೊ. ಶ್ವೇತಾ ಸಜ್ಜನ್, ಪ್ರೊ. ಪ್ರಿಯದರ್ಶಿನಿ, ಪ್ರೊ. ಸಹನಾ, ಪ್ರೊ. ರೇಣುಕಾ, ಮಹೇಶ್ ಸಂಗಮ, ಭಾಗ್ಯಶ್ರೀ ಬಳಿಗಾರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.