ADVERTISEMENT

ಪ್ರಜಾವಾಣಿ ಸಾಧಕರು; ಸಾಂಪ್ರದಾಯಿಕ ಪದಗಳ ಕೋಕಿಲ

​ಪ್ರಜಾವಾಣಿ ವಾರ್ತೆ
Published 1 ಜನವರಿ 2022, 10:53 IST
Last Updated 1 ಜನವರಿ 2022, 10:53 IST
ಮಲ್ಲಮ್ಮ ರೇಶ್ಮಿ
ಮಲ್ಲಮ್ಮ ರೇಶ್ಮಿ   

ಧಾರವಾಡ: ತಾಲ್ಲೂಕಿನ ದೇವರಹುಬ್ಬಳ್ಳಿಯವರಾದ ಮಲ್ಲಮ್ಮ ಸಿದ್ದಪ್ಪ ರೇಶ್ಮಿ ಸಂಪ್ರದಾಯದ ಪದ ಹಾಡುವ ಹಿರಿಯ ಜಾನಪದ ಕಲಾವಿದೆ.

ಅಕ್ಕ ಕಾಳಮ್ಮ ಹಾಗೂ ತಂಗಿ ಪಾರ್ವತೆವ್ವ ಹೊಂಗಲ ಅವರೊಂದಿಗೆ ಹಾಡು ಗಳನ್ನು ಹಾಡುತ್ತಾ ಬಂದಿರುವ ಇವರು 200ಕ್ಕೂ ಹೆಚ್ಚು ಜಾನಪದ ಹಾಡು ಗಳನ್ನು ಹಾಡುತ್ತಾರೆ. ಮೌಖಿಕ ಪರಂಪರೆಯಲ್ಲಿ ಹಾಡು ಗಳನ್ನು ಕಲಿತು ಅದನ್ನು ಸುಶ್ರಾವ್ಯವಾಗಿ ಹಾಡುವ ಇವರು, 1990ರಿಂದಲೂ ಆಕಾಶವಾಣಿಯಲ್ಲಿ ಜಾನಪದ ಹಾಡುಗಳನ್ನು ಹಾಡುತ್ತಾ ಬಂದಿದ್ದಾರೆ.

ನೂರಾರು ಮದುವೆಗಳು, ಸೀಮಂತ ಕಾರ್ಯಕ್ರಮದಲ್ಲಿ ಆಯಾ ಕಾರ್ಯಕ್ಕೆ ತಕ್ಕಂತ ಜಾನಪದ ಹಾಡುಗಳನ್ನು ಹಾಡುತ್ತ ಅದರ ಅರ್ಥ ಹಾಗೂ ನೀತಿಯನ್ನು ತಿಳಿಸುವ ಕೆಲಸ ಮಾಡುತ್ತಾ ಬಂದಿದ್ದಾರೆ. ಆ ಮೂಲಕ ಜಾನಪದ ಸಂಸ್ಕೃತಿಯ ಕೊಂಡಿಯಾಗಿ ಹಳ್ಳಿಗಳಲ್ಲಿ ಇಂದಿಗೂ ಕೆಲಸ ಮಾಡುತ್ತಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.