ADVERTISEMENT

ಹುಬ್ಬಳ್ಳಿ: ಬಿಜೆಪಿಯ 16 ಕಾರ್ಯಕರ್ತರ ಉಚ್ಛಾಟನೆ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2021, 13:38 IST
Last Updated 30 ಆಗಸ್ಟ್ 2021, 13:38 IST

ಹುಬ್ಬಳ್ಳಿ: ಪಾಲಿಕೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪಕ್ಷಕ್ಕೆ ಸೆಡ್ಡು ಹೊಡೆದ ಹಾಗೂ ಪಕ್ಷ ವಿರೋಧಿ ಕೆಲಸ ಮಾಡಿದ ಬಿಜೆಪಿಯ 16 ಜನ ಕಾರ್ಯಕರ್ತರನ್ನು ಆರು ವರ್ಷಗಳ ಕಾಲ ಉಚ್ಛಾಟನೆ ಮಾಡಿ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಅರವಿಂದ ಬೆಲ್ಲದ ಅವರು ಸೋಮವಾರ ಆದೇಶ ಹೊರಡಿಸಿದ್ದಾರೆ.

ಉಚ್ಛಾಟನೆಗೊಂಡವರು: ಸೂರಜ ಪುಡಕಲಕಟ್ಟಿ (ಧಾರವಾಡ ಗ್ರಾಮೀಣ ಕ್ಷೇತ್ರದ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ), ಮಂಜುನಾಥ ನಡಟ್ಟಿ (ಜಿಲ್ಲಾ ಮಾಧ್ಯಮ ಸಂಚಾಲಕ), ರಾಕೇಶ ದೊಡ್ಡಮನಿ (ಎಸ್‌ಸಿ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ), ರಾಜು ಕಡೇಮನಿ (ಒಬಿಸಿ ಮೋರ್ಚಾ ಜಿಲ್ಲಾ ಕಾರ್ಯದರ್ಶಿ), ಶಶಿ ಬಿಜವಾಡ (ಎಸ್.ಸಿ. ಮೋರ್ಚಾ ಉಪಾಧ್ಯಕ್ಷ).

ಲಕ್ಷ್ಮಿ ಉಪ್ಪಾರ, ಲಕ್ಷ್ಮಣ ಉಪ್ಪಾರ, ಹೂವಪ್ಪ ದಾಯಗೋಡಿ, ಹುಲಗಪ್ಪ ಚಲವಾದಿ (ಎಸ್‌ಸಿ ಮೋರ್ಚಾ ಜಿಲ್ಲಾ ಕಾರ್ಯಕಾರಿಣಿ ಸದಸ್ಯ), ಮಂಜು ವಡಕಣ್ಣವರ (ಹುಬ್ಬಳ್ಳಿ–ಧಾರವಾಡ ಸೆಂಟ್ರಲ್‌ ಕ್ಷೇತ್ರದ ಉಪಾಧ್ಯಕ್ಷ), ಕಿರಣ ಉಪ್ಪಾರ (ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ), ಲಕ್ಷ್ಮಣ ಕಲಾಲ, ಲಕ್ಷ್ಮಣ ಕೊರಪಾಟೆ, ರಾಮಚಂದ್ರ ಹದಗಲ್‌ (ಹುಬ್ಬಳ್ಳಿ–ಧಾರವಾಡ ಸೆಂಟ್ರಲ್‌ ಕ್ಷೇತ್ರದ ರೈತ ಮೋರ್ಚಾ ಅಧ್ಯಕ್ಷ), ಸುಧೀಂದ್ರ ಹೆಗಡೆ (ಸೆಂಟ್ರಲ್‌ ಕ್ಷೇತ್ರದ ಉಪಾಧ್ಯಕ್ಷ) ಮತ್ತು ಮಂಜುಳಾ ಅಕ್ಕೂರ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.